



ಸಿನಿಮಾವು ಜೀವನಕ್ಕೆ ಸ್ಫೂರ್ತಿಯಾಗಿರುವ ದಾರಿ
ನಿತಿನ್ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾರ್ಕಳ
ಸಿನಿಮಾ ಕೇವಲ ಜೀವನವಲ್ಲ. ಆದರೆ ಸಿನಿಮಾ ಎಂಬುದು ಕೆಲವೊಬ್ಬರ ಜೀವನದ ದಾರಿಗೆ ಸ್ಪೂರ್ತಿಯಾಗಿದೆ. ತನ್ನ ದಾರಿ ತಪ್ಪಿತೆಂದು ಬೇಸರದಿಂದ ಕುಳಿತ ವ್ಯಕ್ತಿಗೆ ಕೆಲವೊಂದು ಸಿನಿಮಾ ದಾರಿದೀಪವಾಗಿದೆ. ನನ್ನಿಂದ ಏನಾಗದೆಂದು ಕುಗ್ಗಿದ ಮನುಜನಿಗೆ ನಿನ್ನಿಂದ ಸಾಧ್ಯವಿದೆ ಎಂದು ಸಿನಿಮಾ ತಿಳಿಸುತ್ತದೆ. ಸಿನಿಮಾ ಎಂಬುದು ಕೇವಲ ಕೆಟ್ಟದೇ ಆಗಿರುತ್ತದೆ ಎಂದು ಹೇಳಲಾಗದು. ಕೆಲವೊಂದು ಬಾರಿ ಸಿನಿಮಾಗಳು ಒಳ್ಳೆಯ ವಿಚಾರಗಳನ್ನು ನಮಗೆ ತಿಳಿಸುತ್ತದೆ.
ಮನುಷ್ಯರಲ್ಲಿ ಸಿನಿಮಾ ಎಂಬುದು ಕೇವಲ ಮನರಂಜನೆಯ ರೂಪವಾಗಿದೆ. ಆದರೆ ಆ ಸಿನಿಮಾ ಮನುಷ್ಯನ ಜೀವನವನ್ನು ಯಾವ ರೀತಿ ಬದಲಾಯಿಸುತ್ತದೆ ಎಂದು ಹೇಳಲಾಗದು. ಯಾವುದೇ ವಿಚಾರದಲ್ಲೂ ಕೆಟ್ಟದ್ದು ಮತ್ತು ಒಳ್ಳೆಯದು ಇದ್ದೇ ಇರುತ್ತದೆ ಅದರಂತೆ ಸಿನಿಮಾದಲ್ಲಿದೆ ಅದರಲ್ಲಿನ ಒಳ್ಳೆತನ ನೋಡುವ ದೃಷ್ಟಿಕೋನ ನಮ್ಮಲ್ಲಿರಬೇಕು..
ಕೆಲವೊಂದು ಬಾರಿ ಚಲನಚಿತ್ರಗಳು ಕಳೆದು ಹೋದ ಸಮಯದ ಬಗ್ಗೆ ತಿಳಿಸುತ್ತದೆ. ಕೆಲವೊಮ್ಮೆ ಬದುಕಿನ ದಾರಿಯ ನೆನಪು ತರುತ್ತದೆ. ಖುಷಿಯ ಮತ್ತು ಬೇಸರದ ಕ್ಷಣಗಳನ್ನು ಮೆಲುಕು ಹಾಕುತ್ತದೆ. ತಾಯಿಯ ವಾತ್ಸಲ್ಯ, ಗೆಳೆಯರ ಪ್ರೀತಿ ಏನೆಂಬುದನ್ನು ತಾಯಿ ಇಲ್ಲದವರಿಗೆ ತಿಳಿಸಿಕೊಡುತ್ತದೆ. ಈ ಕಾರಣಕ್ಕಾಗಿ ಸಿನಿಮಾ ಮುಖ್ಯ ಪಾತ್ರ ವಹಿಸುತ್ತದೆ.
ಸಿನಿಮ ಎಂಬುದು ಕಲಾವಿದನ ದುಡಿಮೆಗೆ ಆಸರೆಯಾಗಿದೆ. ಕಲಾವಿದನ ಕಲೆಯನ್ನು ಮೆಚ್ಚುವಂತೆ ಈ ಸಿನಿಮಾಗಳು ಮಾಡಿದೆ. ಕೆಲವೊಂದು ಬಾರಿ ವ್ಯಕ್ತಿಯ ಜೀವನದ ಕುರಿತು ತಿಳಿಸುವ ವೇದಿಕೆ, ಪಾತ್ರದಾರಿಗೆ ಹೊಸ ಹೊಸ ಪಾತ್ರ ದೊರಕುವಂತೆ ಸಿನಿಮಾಗಳು ಮಾಡಿದೆ. ಕಲಾವಿದರು ತನ್ನೊಳಗೆ ಎಷ್ಟು ನೋವಿದ್ದರೂ ಕಲೆಗೆ ಮತ್ತು ನೋಡುಗರಿಗೆ ಯಾವುದೇ ರೀತಿಯ ಬೇಸರವಾಗದಂತೆ ಅಭಿನಯಿಸುತ್ತಾರೆ.
ಸಿನಿಮಾ ನಗುವವರನ್ನು ಅಳಿಸುತ್ತದೆ, ಅಳುವವರನ್ನು ನಗಿಸುತ್ತದೆ.ಮನರಂಜನೆ ಯನ್ನು ಸವಿದವರಿಗೆ ಮನೋರಂಜನಾತ್ಮಕವಾಗಿ ಮೂಡಿಬರುತ್ತದೆ. ಸಾಹಿತಿಗಳಿಗೆ ಸಾಹಿತ್ಯಾತ್ಮಕವಾಗಿ, ಪ್ರೇಮಿಗಳಿಗೆ ಪ್ರೇಮದ ಕಾವ್ಯವಾಗಿ ಮೂಡಿಬಂದರೆ ನನಗೆ ಮಾತ್ರ ಸಿನಿಮಾವು ಜೀವನಕ್ಕೆ ಸ್ಫೂರ್ತಿಯಾಗಿರುವ ದಾರಿ ಯಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.