



ವಾಷಿಂಗ್ಟನ್: ಅಮೆರಿಕ ಸೇನೆಯ ಎರಡು ಹೆಲಿಕಾಪ್ಟರ್‌ಗಳು ತರಬೇತಿ ವೇಳೆ ಪರಸ್ಪರ ಘರ್ಷಣೆಯಾದ ಪರಿಣಾಮ 9 ಯೋಧರು ಮೃತಪಟ್ಟಿದ್ದಾರೆ.
ಕೆಂಟುಕಿ ರಾಜ್ಯದ ಪೋರ್ಟ್ ಕ್ಯಾಂಪ್‌ಬೆಲ್ ಎಂಬಲ್ಲಿ ಗುರುವಾರ ಈ ದುರಂತ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ 9 ಯೋಧರು ಮೃತಪಟ್ಟಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಜಾನ್ ಲುಬಾಸ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಕಾರ್ಯಾಚರಣೆಗೆಂದು ತಯಾರಿಸಲ್ಪಟ್ಟಿದ್ದ ಬ್ಲಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಯೋಧರು ತರಬೇತಿಗಾಗಿ ಬಳಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ತರಬೇತಿ ವೇಳೆ ಎರಡೂ ಹೆಲಿಕಾಪ್ಟರ್‌ಗಳು, ಪೈಲಟ್‌ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಿಂದ ಆಕಾಶದಲ್ಲೇ ಸ್ಪೋಟವಾಗಿ ನೆಲಕ್ಕಪ್ಪಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.