



ಬೆಂಗಳೂರು: ಇದೇ ಅಕ್ಟೋಬರ್ 25 ರಿಂದ ಒಂದರಿಂದ ಐದನೇ ತರಗತಿ ವರೆಗೆ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಸರ್ಕಾರ ಅಧಿಕೃತ ಅನುಮತಿ ನೀಡಿದೆ.
ಕೊರೋನ ಹಿನ್ನೆಲೆ ಯಲ್ಲಿ ಒಂದೂವರೆ ವರ್ಷದ ಬಳಿಕ ಪೂರ್ತಿ ಬಂದ್ ಆಗಿದ್ದ ಪ್ರಾಥಮಿಕ ಶಾಲೆಯನ್ನು ಇದೀಗ ತೆರೆಯಲಾಗುತ್ತಿದೆ. 1 ರಿಂದ 5ನೇ ತರಗತಿ ಶಾಲೆ ನಡೆಸಲು ರಾಜ್ಯ ಸರ್ಕಾರ ಇಂದು ತಜ್ಞರ ಜೊತೆಗಿನ ಸಭೆಯ ಬಳಿಕ ಅನುಮತಿ ನೀಡಿದೆ. ಮಕ್ಕಳನ್ನು ಕಳಿಸಿಕೊಡುವ ನಿರ್ಧಾರ ಪೋಷಕರುಗೆ ಬಿಡಲಾಗಿದೆ. ಯಾವುದೇ ಶಾಲೆಯಲ್ಲಿ ಮಕ್ಕಳ ಹಾಜರಾತಿಗೆ ಕಡ್ಡಾಯ ಮಾಡುವಂತಿಲ್ಲ. ಅಲ್ಲದೆ, ತರಗತಿಯಲ್ಲಿ ಶೇಕಡ 50 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ತರಗತಿಯಲ್ಲಿ 1 ಮೀಟರ್ ಅಂತರದಲ್ಲಿ ಕೂರಬೇಕು. ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು.
ಪ್ರವೇಶ ದ್ವಾರಗಳಲ್ಲಿ ಸೇರದಂತೆ ಶಾಲೆಯ ಒಳಗೆ, ಆವರಣದಲ್ಲಿ, ತರಗತಿಗಳ ಒಳಗೆ ಗುಂಪು ಕೂಡುವಂತಿಲ್ಲ. ಶಿಕ್ಷಕರು ಮತ್ತು ಸಿಬಂದಿ ಕೊರೊನಾ ಲಸಿಕೆಯ ಎರಡು ಡೋಸನ್ನೂ ಪಡೆದಿರಬೇಕು. ಎರಡು ಡೋಸ್ ಪೂರ್ಣ ಮಾಡಿರುವ ಶಿಕ್ಷಕರು, ಸ್ಟಾಫ್ ಗೆ ಮಾತ್ರ 1-5 ತರಗತಿಗಳೊಳಗೆ ಪ್ರವೇಶ ಕಲ್ಪಿಸಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.