



ಉಡುಪಿ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ , ಹಾಗು ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲೂ ಗಾಳಿಯ ಒತ್ತಡದಿಂದ ಹಾಗು ಅಲೆಗಳ ಬೋರ್ಗರೆತ ಹೆಚ್ಚುತಿದ್ದು ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಮುಳುಗಡೆಯಾಗಿದೆ .ಗೋವ ಪಣಜಿಯಲ್ಲಿ ಸಮುದ್ರ ವ್ಯಾಪ್ತಿಯಲ್ಲಿ ಬೋಟ್ ಮುಳುಗಡೆಯಾಗಿದ್ದು ಅದರಲ್ಲಿದ್ದ ಏಳು ಮೀನುಗಾರರನ್ನು ರಕ್ಷಿಸಲಾಗಿದೆ
ಮಾತಾ ಜಟಗೇಶ್ವರ , ಪಲ್ಲಕ್ ಹೆಸರಿನ ಬೋಟ್ಗಳು ಮಲ್ಪೆಯಿಂದ ಗೋವಾದತ್ತ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿತ್ತು .ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ. , ಇದರಿಂದಾಗಿ ಮುಳುಗಡೆಯಾಗಿ ಕೋಟ್ಯಾಂತರ ರೂಪಾಯಿ ನಷ್ಟ ವಾಗಿದೆ . ಕಡಲ ಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು ಇದನ್ನೂ ಸಹ ರಕ್ಷಣೆ ಮಾಡಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.