



ಕಾರ್ಕಳ: 33 ಅಡಿ ಎತ್ತರದ ಕಂಚಿನ ಪರಶುರಾಮ ಪುತ್ಥಳಿ ಅನಾವರಣದ ಸಂದರ್ಭದಲ್ಲಿ ಸಾವಿರ ಶಂಖವಾದಕರಿಂದ ಶಂಖನಾದವು ಮೊಳಗಿತು. ಕೇಸರಿ ಶಾಲು ಧರಿಸಿಕೊಂಡ ಶಂಖವಾದಕರು ಮೂರು ಬಾರಿ ಶಂಖ ಊದುವ ಮೂಲಕ ಪರಶುರಾಮನಿಗೆ ವಿಶೇಷ ಗೌರವ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ , ಇಂಧನ ಸಂಸ್ಕೃತಿ ಖಾತೆ ಸಚಿವ ಸುನೀಲ್ ಕುಮಾರ್ , ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ , ನಿರ್ದೇಶಕ ರಿಷಬ್ ಶೆಟ್ಟಿ, ಕೇಂದ್ರ ಸಚಿವೆ ಶೋಭಕರಂದ್ಲಾಜೆ ಪರಸುರಾಮನ ಪುತ್ಥಳಿ ಗೆ ಪುಷ್ಪಾರ್ಚನೆ ಅರ್ಪಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.