logo
WhatsApp Image 2026-04-02 at 14.46.04.jpeg
hindalco everlast.jpeg

ಅಧಿಕಾರಿಗಳ ಬಿಲ್ಡಪ್ ಗೆ ಬ್ರೇಕ್ ಹಾಕಿದ ಸಿ.ಎಂ ,ವೈಯಕ್ತಿಕ ಪ್ರದರ್ಶನ ನಿಷೇಧಿಸಿ ಎಂದ ಸರಕಾರ

ಟ್ರೆಂಡಿಂಗ್
share whatsappshare facebookshare telegram
19 Sept 2021
post image

ಅನಧಿಕೃತ ಹೇಳಿಕೆಗಳನ್ನ ನೀಡದಂತೆ ಮತ್ತು ಸರ್ಕಾರಿ ಕಾರ್ಯಕ್ರಮಗಳು ವೈಯಕ್ತಿಕ ಪ್ರದರ್ಶನಗಳಂತೆ ತೋರ್ಪಡಿಸಿಕೊಳ್ಳಬಾರದು ಎಂದು ಸರಕಾರ ಸೂಚನೆ ನೀಡಿದೆ.

ಸರ್ಕಾರಿ ಅಧಿಕಾರಿಗಳು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ/ಪತ್ರಿಕಾ ಪ್ರಕಟಣೆ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ.ಇದರಿಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದಂತಾಗಿದೆ. ಹಾಗೆಯೇ, ಸಾಮಾಜಿಕ ಮಾಧ್ಯಮಗಳ ಮೂಲಕ ಇಲಾಖೆಯ/ಸರ್ಕಾರದ ಸಾಧನೆಗಳನ್ನು, ವೈಯಕ್ತಿಕ ಸಾಧನೆಗಳೆಂಬಂತೆ ಪ್ರದರ್ಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದು. ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ, ಸರ್ಕಾರದ/ಆಡಳಿತದ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.ತಮ್ಮ ಅಧಿಕೃತ ಸರಕಾರದ ಹೆಸರಿನ ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕೆಂದು ಹೇಳಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.