



ವಾಷಿಂಗ್ಟನ್: 3 ದಿನಗಳ ಹಿಂದಷ್ಟೇ ಎಲೋನ್ ಮಸ್ಕ್ ಟ್ವಿಟ್ಟರ್‌ನ ಲೋಗೋವನ್ನು ನೀಲಿ ಹಕ್ಕಿಯಿಂದ (Bird) ಬದಲಾಯಿಸಿ ನಾಯಿಯ ಚಿತ್ರವನ್ನು ಇರಿಸಿದ್ದರು. ಮಸ್ಕ್‌ನ ಈ ಕ್ರಮ ಬಳಕೆದಾರರನ್ನು ಅಚ್ಚರಿಪಡಿಸಿದ್ದು ಮಾತ್ರವಲ್ಲದೇ ಭಾರೀ ಚರ್ಚೆಗೂ ಗ್ರಾಸವಾಗಿತ್ತು.
ನಾಯಿಯ ಲೋಗೋ ಟ್ವಿಟ್ಟರ್‌ನಲ್ಲಿ ಕೇವಲ ಕೆಲ ಗಂಟೆಗಳ ವರೆಗೆ ಮಾತ್ರವೇ ಇರಬಹುದು, ಶೀಘ್ರವೇ ಇದು ಮತ್ತೆ ಬದಲಾಗಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವಿಸಿದ್ದರು. ಆದರೆ ನಾಯಿಯ ಲೋಗೋವನ್ನು 3 ದಿನಗಳ ಕಾಲ ಹಾಗೇ ಇಡಲಾಗಿತ್ತು. ಇದೀಗ 3 ದಿನಗಳ ಬಳಿಕ ಟ್ವಿಟ್ಟರ್‌ನ ಲೋಗೋ ಮತ್ತೆ ನೀಲಿ ಹಕ್ಕಿಗೆ ಮರಳಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.