logo
WhatsApp Image 2026-04-02 at 14.46.04.jpeg
hindalco everlast.jpeg

ಕಾಮೆಡ್ ಕೆ ಫಲಿತಾಂಶ: ಜ್ಞಾನಸುಧಾದ ಪ್ರಭಂಜನ್ ಬಾಬುಗೆ ರಾಷ್ಟ್ರ ಮಟ್ಟದಲ್ಲಿ 82ನೇ ರ್ಯಾಂಕ್

ಟ್ರೆಂಡಿಂಗ್
share whatsappshare facebookshare telegram
17 Jun 2023
post image

5 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಲಾದ 2023ರ ಸಾಲಿನ ಕಾಮೆಡ್.ಕೆ ಪರೀಕ್ಷೆಯ ಫಲಿತಾಂಶವು ಇತ್ತೀಚೆಗೆ ಪ್ರಕಟಗೊಂಡಿದ್ದು ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದು, ಪ್ರಭಂಜನ್ ಬಾಬು 99.9018012 ಪರ್ಸಂಟೈಲ್ನೊಂದಿಗೆ 82ನೇ ರ್ಯಾಂಕ್ ಗಳಿಸಿದ್ದಾರೆ.

ಹಾಸನದ ಉದ್ಯಮಿ ಸುರೇಶ್ ಬಾಬು ಮತ್ತು ಮಮತಾ ಸುರೇಶ್ ದಂಪತಿಯ ಸುಪುತ್ರರಾಗಿದ್ದು, ಈ ಬಾರಿಯ ಕೆ.ಸಿ.ಇ.ಟಿ. ಫಲಿತಾಂಶದಲ್ಲಿ ಈತ 341ನೇ ರ್ಯಾಂಕ್ ಗಳಿಸಿದ್ದಾರೆ. ಜೊತೆಗೆ 99.7249254 ಪರ್ಸಂಟೈಲ್ನೊಂದಿಗೆ ಶ್ರೇಯಸ್ ಆರ್.ಗೌಡ 227ನೇ ರ್ಯಾಂಕ್, 99.5942838 ಪರ್ಸಂಟೈಲ್ನೊಂದಿಗೆ ಕೀರ್ತನಾ.ಎಚ್.ಭಟ್ 331ನೇ ರ್ಯಾಂಕ್, 99.3123135 ಪರ್ಸಂಟೈಲ್ನೊಂದಿಗೆ ಸಮ್ಯಕ್ರಾವ್ 571ನೇ ರ್ಯಾಂಕ್, 99.3123135 ಪರ್ಸಂಟೈಲ್ನೊಂದಿಗೆ ಸಾತ್ವಿಕ್ ಬಿ,ಸಿ. 575ನೇ ರ್ಯಾಂಕ್ ಪಡೆದಿದ್ದಾರೆ.

ಇವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದನೆಯನ್ನು ಸಲ್ಲಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.