



ಹೆಬ್ರಿ : ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಿಂದೂ ಯುವಕರನ್ನು ಕೊಲೆ ಮಾಡಿಸಿ, ಹಿಜಾಬ್ ಗಲಾಟೆ, ಕೋಮುಗಲಭೆ ಸೃಷ್ಠಿಸುತ್ತಿದೆ, ಗಲಭೆಯ ಹಿಂದೆ ಬಿಜೆಪಿಯ ಕಾಣದ ಕೈಗಳ ಷಡ್ಯಂತ್ರ ಇದೆ, ಹತಾಷೆಯಿಂದಾಗಿ ಎಲ್ಲವೂ ನಡೆಯುತ್ತಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಮುಸ್ಲಿಮರನ್ನು ಗುರಿಯಾಗಿಸಿ ಹಿಂದೂ ಯುವಕನ ಹತ್ಯೆ ನಡೆದಿದೆ, ಜನಸಾಮಾನ್ಯರ ಆಸ್ತಿಪಾಸ್ತಿಗಳು ಹಾನಿಯಾಗಿವೆ, ಎಲ್ಲವನ್ನೂ ಕಾಂಗ್ರೆಸ್ ಖಂಡಿಸುತ್ತದೆ, ಶಿವಮೊಗ್ಗದ ಹರೀಶ್ ಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಕುಮ್ಮಕ್ಕು ಇದೆ, ಬಿಜೆಪಿಯ ಆಡಳಿತ, ಬೆಲೆ ಏರಿಕೆಯಿಂದ ಜನತೆ ಬಿಜೆಪಿಯ ವಿರುದ್ಧ ರೋಸಿ ಹೋಗಿರುವುದನ್ನು ಅರಿತು ಜನರನ್ನು ದಾರಿ ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಮಂಜುನಾಥ ಪೂಜಾರಿ ದೂರಿದರು.
ಈಶ್ವರಪ್ಪ ರಾಜೀನಾಮೆಯಿಂದ ಪಾರದರ್ಶಕ ತನಿಖೆ : ಈಶ್ವರಪ್ಪ ಅವರ ಕುಮ್ಮಕ್ಕಿನಿಂದಾಗಿ ಗಲಭೆ ಆಗಿದೆ, ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಿದರೇ ಮಾತ್ರ ಪಾರದರ್ಶಕ ತನಿಖೆ ನಡೆಯಲು ಸಾಧ್ಯವಿದೆ, ಸಿದ್ಧರಾಮಯ್ಯ ಸರ್ಕಾರದಲ್ಲಿ ಯಾವೂದೇ ಗಲಭೆಗಳು ಇರಲಿಲ್ಲ, ಈ ಹಿಂದೂ ಪರ ಸರ್ಕಾರ ಎನ್ನುವ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರಿಂದಲೇ ಗಲಭೆಗಳು ನಡೆಯುತ್ತಿದೆ, ಮಾನವ ಧರ್ಮ ಮೊದಲು, ಆಮೇಲೆ ಎಲ್ಲಾ ಧರ್ಮಗಳು, ಮೊದಲು ಶಾಂತಿಯ ರಾಜ್ಯದ ನಿರ್ಮಾಣ ಮಾಡಿ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್ ಕುಮಾರ್ ಅಜೆಕಾರ್, ಕಾಂಗ್ರೆಸ್ ವಿವಿಧ ಪ್ರಮುಖರಾದ ಹಾಜಿ ಸಾಹೇಬ್, ಆಸ್ಟೀನ್ ರಾಡ್ರಿಗಸ್, ವಿಶುಕುಮಾರ್, ಶಶಿಕಲಾ ಆರ್ ಪಿ, ಹರೀಶ ಕುಲಾಲ್ ಇದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.