logo
WhatsApp Image 2026-04-02 at 14.46.04.jpeg
hindalco everlast.jpeg

ಹಿಂದೂ ದೇಗುಲ ಅಭಿವೃದ್ಧಿ ಆಗುವುದು ಕಾಂಗ್ರೆಸ್ಸಿಗೆ ಬೇಕಿಲ್ಲ : ಮಹಾವೀರ್ ಹೆಗ್ಡೆ

ಟ್ರೆಂಡಿಂಗ್
share whatsappshare facebookshare telegram
7 May 2023
post image

ಕಾರ್ಕಳ: ಕಾರ್ಕಳದ ಪುರಾತನ ದೇಗುಲ ಶ್ರೀ ಮಾರಿಯಮ್ಮ ಇಡೀ ಕಾರ್ಕಳ ಕ್ಷೇತ್ರದ ಭಕ್ತರಿಗೆ ಸಂಬಂಧಿಸಿದ್ದು, ಸರ್ವ ಭಕ್ತರ ನೆರವಿನಿಂದ ಭಕ್ತರ ಆಶಯದಂತೆ, ಸರಕಾರದ ಸಹಕಾರ ಪಡೆದು ದೇವಿ ದೇಗುಲದ ಜೀರ್ಣೋದ್ಧಾಾರ ನಡೆಸಿ, ಬ್ರಹ್ಮಕಲಶ ವೈವಯುತವಾಗಿ ನಡೆಸಿದರೆ ಇಷ್ಟು ದೊಡ್ಡ ದೇವಸ್ಥಾನ ಬೇಕಿತ್ತ? ವೈಭವ ಬೇಕಿತ್ತ ಎಂದೆಲ್ಲ ದೇವಸ್ಥಾನದ ಅಭಿವೃದ್ಧಿಯನ್ನೇ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲವೇ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ಸಿಗರ ಮನಸ್ಥಿತಿ ಹೇಗಿದೆ ಎಂದರೆ ಅಭಿವೃದ್ಧಿ ಆಗಿಲ್ಲ ಎಂದರೆ ಆಗಿಲ್ಲ ಎನ್ನುತ್ತಾರೆ. ಅಭಿವೃದ್ಧಿ ಮಾಡಿದಾಗ ಅದನ್ನು ಟೀಕಿಸುತ್ತಾರೆ. ಹಾಗಿದ್ದರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್ಸಿನ ಮನಸ್ಥಿತಿ ಏನು ಎನ್ನುವುದೇ ಅರ್ಥವಾಗುತಿಲ್ಲ. ಒಂದು ಕಡೆ ಹಿಂದೂ ದೇವಸ್ಥಾನಗಳ ಅಭಿವೃದ್ಧಿ ಸಹಿಸದೆ ಟೀಕಿಸುವವರು ತಮ್ಮದೇ ಪಕ್ಷದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಗುಟ್ಟಾಗಿ ಮಸೀದಿ ಕಟ್ಟಿ ಕೊಡುತ್ತೇವೆ ಎನ್ನುತ್ತ ತಿರುಗಾಡುತ್ತಿದ್ದಾರೆ ಎಂದರು.

ಮಾರಿಗುಡಿ ದೇವಸ್ಥಾನದ ಜೀರ್ಣೊದ್ಧಾರ, ಬ್ರಹ್ಮಕಲಶ ಸಂದರ್ಭದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ಅದರಲ್ಲಿ ನಮ್ಮ ಕಾರ್ಯಕರ್ತರು ಸೇರಿದ್ದರು. ಸಚಿವರು ನನ್ನಿಂದಲೆ ಆಗಿದೆ ಎಂದು ಎಲ್ಲಿ ಹೇಳಿದ್ದಾರೆ ಎಂದ ಅವರು ಕಾಂಗ್ರೆಸ್‌ನವರಿಗೆ ಒಟ್ಟಾರೆ ಟೀಕಿಸಲು ವಿಷಯವಿಲ್ಲ ಅದಕ್ಕೆ ಇಂತಹ ವಿಚಾರಗಳನ್ನು ಎತ್ತುತ್ತಿದೆ ಎಂದರು.

ಹಿಂದೂ ಅಶ್ಲೀಲ ಎನ್ನುವ ಪದ ಬಳಕೆ ಮಾಡುವ ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಾಗುತಿಲ್ಲ, ಹಿಂದೂ ದೇಗುಲ ಅಭಿವೃದ್ಧಿ ಆಗುವುದು ಕಾಂಗ್ರೆಸ್ಸಿಗೆ ಬೇಕಿಲ್ಲ ಎಂದ ಅವರು ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಅಮಾಯಕ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಾರೆ. ಇನ್ನು ಧಾರ್ಮಿಕ ವಿಚಾರದಲ್ಲಿ ಅದೇ ಮಾನಸಿಕತೆಯುಳ್ಳ ಇಲ್ಲಿಯವರು ಟೀಕೆ ಮಾಡುವುದರಲ್ಲಿ ವಿಶೇಷವೇನಲ್ಲ. ಧಾರ್ಮಿಕ ವಿಚಾರ ಬಂದಾಗ ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳ ವೈಭವ ಕಾಣುವುದಕ್ಕೆ ಅರಗಿಸಿಕೊಳ್ಳಲು ಆಗುತಿಲ್ಲ ಎಂದು ದೂರಿದರು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.