



ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಬಿಜೆಪಿ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ನ ಡುಪ್ಲಿಕೇಟ್ ಮುಖಂಡ ಅಮೃತ್ ಶೆಣೈ ಮಾಡಿರುವ ಭಾಷಣಕ್ಕೆ ಕಾರ್ಕಳ ಭಾರತೀಯ ಜನತಾ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಕಳೆದ ಸುಮಾರು ೬೦ ವರ್ಷಗಲ ಕಾಲ ದೇಶವನ್ನು ಲೂಟಿ ಹೊಡೆದು ಆಳಿದ ಕಾಂಗ್ರೆಸ್, ಮೋದಿ ಮೋಡಿಯಿಂದ ಸರ್ವನಾಶವಾಗಿದೆ. ಸ್ವಲ್ಪ ಕಡೆ ಅಳಿದುಳಿದ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಲ್ಲದೆ ಪ್ರತಿಭಟನೆಗೆ ಉಡುಪಿಯಿಂದ ಕಾಂಗ್ರೆಸ್ ನ ಡುಪ್ಲಿಕೇಟ್ ನಾಯಕರನ್ನು ಆಮದು ಮಾಡಿಕೊಂಡು ಹಾಗೂ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಕಾರ್ಯಕರ್ತರಿರುವ ಕಾರಣ ಬಸ್ ನಿಲ್ದಾಣದಲ್ಲಿ ಬಿಜಾಪುರದ ಕೂಲಿ ಕಾರ್ಮಿಕರಿಗೆ ಅವಲತ್ತು ಕೊಂಡು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಸಿರುವುದು ತೀವ್ರ ಹಾಸ್ಯಾಸ್ಪದ. ಗುಜಾರಾತ್‌ನ ಗೋದ್ರಾಹತ್ಯಾ ಕಾಂಡದಿಂದ ಹಿಡಿದು ಅಗ್ನಿಪಥ ಯೋಜನೆಯ ಬಗ್ಗೆ ಪ್ರತಿಭಟನೆ ಮಾಡಿ ದೇಶದಾದ್ಯಂತ ಗಲಭೆ ಹಬ್ಬಿಸಿ, ಬೆಂಕಿ ಹಂಚಿ ಸಂಭ್ರಮಿಸುತ್ತಿರುವ ಕಾರ್ಯಕರ್ತರು ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎನ್ನುವುದು ಕಾಂಗ್ರೆಸ್‌ನ ಡುಪ್ಲಿಕೇಟ್ ಮುಖಂಡರಾದ ಅಮೃತ್ ಶೆಣೈ ಅರ್ಥಮಾಡಿಕೊಳ್ಳುವುದು ಒಳಿತು. ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಪರಿಷ್ಖರಣೆಯ ಬಗ್ಗೆ ಈಗಾಗಲೇ ರಾಜ್ಯ ಕಂದಾಯ ಸಚಿವರಾದ ಆರ್ ಅಶೋಕ್ ರವರು ಕಾಂಗ್ರೆಸ್ ಸರಕಾರವಿದ್ದಾಗ ರಾಷ್ಟ್ರಧ್ವಜ ಬಗ್ಗೆ ಅಗೌರವ , ಕೆಂಪೇಗೌಡರನ್ನು ಕಡೆಗಣಿಸಿದ್ದ ಸಿದ್ದರಾಮಯ್ಯ, ರಾಜವಂಶಸ್ಥರ ಕಡೆಗಣನೆ, ಮತಾಂದ ಟಿಪ್ಪುವಿನ ವೈಭವೀಕರಣ, ಮಧುರೆಯ ಶ್ರೀ ಕೃಷ್ನ ಹಾಗೂ ಸೋಮನಾಥ ದೇಗುಲದ ವಿಚಾರಕ್ಕೆ ಕತ್ತರಿ, ವಿಜಯನಗರ ಸಾಮ್ರಾಜ್ಯ ಮಾಹಿತಿಗೆ ಕೊಕ್ಕೆ ಹೀಗೆ ಹಲವಾರು ವಿಷಯಗಳ ಬಗ್ಗೆ ವಿವರಣೆ ನೀಡಿ ಇದಕ್ಕೆ ಕಾಂಗ್ರೆಸ್ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. ಈಗಾಗಲೇ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಡುಪ್ಲಿಕೇಟ್ ನಾಯಕರನ್ನು ಕಾರ್ಕಳಕ್ಕೆ ತಂದು ಭಾಷಣ ಮಾಡಿಸಿ ಇದ್ದ ಸ್ವಲ್ಪ ಅಸ್ತಿತ್ವ ಕಳೆದುಕೊಳ್ಳಬಹುದೋ ಎಂಬ ಭೀತಿ ನಮಗಿದೆ. ಎಂದು ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆ.ಎಸ್ ಹರೀಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.