logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾಂಗ್ರೆಸ್ ಯಾವತ್ತೂ ಮಾನವ ಹಕ್ಕು,ಸ್ವಾಯತ್ತತೆ ಮತ್ತು ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ : ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್

ಟ್ರೆಂಡಿಂಗ್
share whatsappshare facebookshare telegram
11 Oct 2023
post image

ಕಾಶ್ಮೀರವಾಗಲಿ ಅದು ಪ್ಯಾಲೆಸ್ತೈನ್ ಅಥವಾ ಅಫಘಾನಿಸ್ತಾನವೇ ಆಗಲಿ ಕಾಂಗ್ರೆಸ್ ಯಾವತ್ತೂ ಮಾನವ ಹಕ್ಕು,ಸ್ವಾಯತ್ತತೆ ಮತ್ತು ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ ಎಂದು ಇತ್ತೀಚೆಗೆ ಕಾರ್ಕಳ ಶಾಸಕ ಮಾಜಿ ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಯಿಸಿದೆ.

ಇತಿಹಾಸ ಅರಿಯದವರಿಗೆ ವರ್ತಮಾನವು ಕೇವಲ ವಿಪ್ಲವವಾಗಿ ಕಾಣುತ್ತದೆ. ಪ್ಯಾಲೇಸ್ತೈನ್ ಇಸ್ರೇಲ್ ಸಂಘರ್ಷ 60 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಫ್ಯಾಲೇಸ್ತೈನಿನ ಸ್ವಾಯತ್ತತೆ ಯೊಂದಿಗಿನ ಇಸ್ರೇಲಿನ ಸೌಹಾರ್ಧಯುತ ರಾಜತಾಂತ್ರಿಕ ಸಂಬಂಧಕ್ಕಾಗಿ, ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ತತ್ವ ಸಿದ್ಧಾಂತದಡಿ ತನ್ನ ಬದುಕನ್ನೆ ಪಣವಿಟ್ಟು ಹೋರಾಡಿದ ಪಿಎಲ್ಒ ನಾಯಕ ದಿ. ಯಾಸರ್ ಅರಾಫತ್ ಹೋರಾಟದ ಐತಿಹಾಸಿಕತೆಯ ನೈಜ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯಕಾರಿಣಿ ಯಲ್ಲಿ ಪ್ಯಾಲೇಸ್ತೈನಿಯನ್ನರ ಬದುಕಿನ ಕಷ್ಟಕಾಲದಲ್ಲಿ ನಾವಿದ್ದೇವೇ ಎಂದಿದೆ. ಅದರೊಂದಿಗೆ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿಯನ್ನು ಸ್ಪಷ್ಟ ಶಬ್ದಗಳಿಂದ ಖಂಡಿಸಿದೆ. ಅಷ್ಟಕ್ಕೂ ಅರಬ್ ರಾಷ್ಟ್ರಗಳ ಮುನಿಸಿನ ಪ್ರತಿರೋಧದ ಹೊರತಾಗಿಯೂ ಇಸ್ರೇಲಿನೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿ ರಾಯಭಾರಿಗಳ ನೇಮಕಾತಿ ಮಾಡಿದ್ದೇ ಕಾಂಗ್ರೆಸ್ ಆಡಳಿತದಲ್ಲಿ. ಪ್ರಧಾನಿ ದಿ. ನರಸಿಂಹ ರಾವ್ ಅವಧಿಯಲ್ಲಿ ಎನ್ನುವುದು ಬಹುಶ ಬಿಜೆಪಿ ನಾಯಕರಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತಾವಧಿಯಲ್ಲಿ ದಿ. ಪ್ರಧಾನಿ ಜವಾಹರಲಾಲ್ ನೆಹರು ವಿಶ್ವ ರಾಜತಾಂತ್ರಿಕತೆಗೆ ಪರಿಚಯಿಸಿದ ಪಂಚಶೀಲ ತತ್ವ, ನಿರ್ಲಿಪ್ತ ಧೋರಣೆಯ ತಳಹದಿಯ ಮೇಲೆ ವಿಶ್ವದ ಶಾಂತಿ ಸೌಹಾರ್ಧತೆಗೆ ನೀಡಿದ ಕೊಡುಗೆ ಅಪಾರ. ವಿಶ್ವದ ಎದುರು ಉಗ್ರವಾದದ ವಿರುದ್ಧ ಮಾತಾಡುತ್ತಲೆ ಮನೆಯಲ್ಲಿ ಧರ್ಮದ ಬೇರು ಅಗೆದು ರಾಜಕೀಯ ಮಾಡುವ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಉದಾರವಾದದ ಸೃಜನಶೀಲ ರಾಜನೀತಿ ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.