logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಪಕ್ಷ ಸೇರ್ಪಡೆ

ಟ್ರೆಂಡಿಂಗ್
share whatsappshare facebookshare telegram
26 Apr 2023
post image

ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಾಟಕವಾಡ್ತಿದೆ ಕಾಂಗ್ರೆಸ್: ಮಹಾವೀರ ಹೆಗ್ಡೆ

ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ಸಿಗೆ ಕಾರ್ಯಕರ್ತರ ಅಭಾವ ತಲೆದೋರಿದೆ. ಮುಜುಗರದಿಂದ ಪಾರಾಗಲು ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಕರೆತಂದು ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆಗೊಳಿಸುವ ನಾಟಕವಾಡಿ ಅಬ್ಬರದ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ.

ಕಾಂಗ್ರೆಸ್ ಕಳೆದ ನಾಲ್ಕು ವರುಷ ಕಾರ್ಕಳದಲ್ಲಿ ಅಸ್ತಿತ್ವವನ್ನೆ ಹೊಂದಿರಲಿಲ್ಲ. ಮನೆಯೊಂದು ಹತ್ತಾರು ಬಾಗಿಲು ಎನ್ನುವ ಹಾಗೇ ಕಾರ್ಕಳದಲ್ಲಿ ಕಾಣೆಯಾಗಿ ದಿವಾಳಿತನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರೆಸ್ ಅನ್ನು ಹುಡುಕುವ ಪರಿಸ್ಥಿತಿ ಇದೆ. ಈಗ ಇದ್ದೇವೆ ಎನ್ನುವುದನ್ನು ತೋರ್ಪಡಿಸಿಕೊಳ್ಳಲು ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ. ಪಕ್ಷದಲ್ಲಿ ಅಳಿದುಳಿದವರನ್ನು, ತಟಸ್ಥರಾಗಿದ್ದವರನ್ನು ಹುಡುಕಿಕೊಂಡು ಹೋಗಿ ಕರೆ ತಂದು ವೇದಿಕೆ ಹತ್ತಿಸಿ, ಪಕ್ಷದ ಧ್ವಜ ನೀಡಿ ಸೇರ್ಪಡೆಯ ನಾಟಕ ಆಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ಸಿಗೆ ಕಾರ್ಯಕರ್ತರೆ ಸಿಗುತಿಲ್ಲ. ಅದಕ್ಕಾಗಿಯೇ ಅವರದೇ ಪಕ್ಷದ ಕಾರ್ಯಕರ್ತರನ್ನು ಮತ್ತೆ ಸೇರ್ಪಡೆಗೊಳಿಸುತ್ತಿದೆ. ಅಬ್ಬರದ ಪ್ರಚಾರಕ್ಕೆ ಪ್ರಯತ್ನಿಸುತ್ತಿದೆ. ಇದು ಆ ಪಕ್ಷಕ್ಕೆ ಎಂತಹ ದಯಾನೀಯ ಸ್ಣಿತಿ ಬಂದಿದೆ ಎನ್ನುವುದನ್ನು ತೋರಿಸುತ್ತಿದೆ. ಹಣ, ಅಮಿಷ ಒಡ್ಡುವ ಮೂಲಕವು ಪಕ್ಷ ಸೇರ್ಪಡೆ ಎಂಬ ಅಬ್ಬರದ ಪ್ರಚಾರದ ಮೂಲಕ ಜನರನ್ನು ಮರುಳು ಮಾಡುವ ಆ ಪಕ್ಷದ ನಾಯಕರ ಪ್ರಯತ್ನ ಫಲಿಸದು. ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠೆಗೆ ಬದ್ಧರಾಗಿದ್ದು, ಅಪ್ಪಿ ತಪ್ಪಿಯೂ ಕಾಂಗ್ರೆಸ್ ಸೇರುವುದಾಗಲಿ ಅತ್ತ ಕಡೆ ಮುಖ ಮಾಡುವುದಿಲ್ಲ ಆ ವಿಶ್ವಾಸ ನಮಗಿದೆ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತರ ಸೇರ್ಪಡೆ ಎಂದು ದಾರಿ ತಪ್ಪಿಸುವ ಕುತಂತ್ರ ರಾಜಕೀಯದ ಭಾಗವಾಗಿ ಪಕ್ಷ ಸೇರ್ಪಡೆ ನಾಟಕವಾಡುತ್ತಿರುವ ಪಕ್ಷದ ಹೀನಾಯ ಸ್ಥಿತಿ ಬಗ್ಗೆ ಕ್ಷೇತ್ರದ ಜನತೆ ತಿಳಿದುಕೊಂಡಿದ್ದಾರೆ.

ಕಾಂಗ್ರೆಸನ್ನೆ ನಂಬದ ಈ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬುದನ್ನು ಯಾರೂ ನಂಬಲಾರರು. ಅಪಪ್ರಚಾರ, ಸುಳ್ಳು, ನಾಟಕಗಳಿಂದ ವಾಸ್ತವ ಮರೆ ಮಾಚಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಎನ್ನುವ ನಂಬಿಕೆ ಕಾಂಗ್ರೆಸ್ಗೆ ಬೇಡ. ಈ ಭ್ರಮೆಯಿಂದ ಪಕ್ಷದ ನಾಯಕರು ಇನ್ನಾದರೂ ಹೊರ ಬರಲಿ. ಈ ತನಕ ಅಪಪ್ರಚಾರ ನಡೆಸಿದ್ದು ಸಾಕು. ಈಗ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ ಅಪಪ್ರಚಾರ ಆ ಪಕ್ಷದ ಸುಳ್ಳಿನ ಇನ್ನೊಂದು ಮುಖ ಎಂದು ಲೇವಡಿ ಮಾಡಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.