


ಹವಾಯಿ: ಮಾಯಿ ದ್ವೀಪದಲ್ಲಿ ಸಂಭವಿಸಿದ ವಿನಾಶಕಾರಿ ಕಾಡ್ಗಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ 67ಕ್ಕೆ ಏರಿಕೆ ಆಗಿದೆ.
ಆ.9 ರಂದು ಹತ್ತಿರುವ ಕಾಡ್ಗಿಚ್ಚು ದ್ವೀಪದಾದ್ಯಂತ ವ್ಯಾಪಿಸುತ್ತಿದೆ. ಸಾವಿನ ಸಂಖ್ಯೆಯು ಏರಿಕೆ ಆಗುತ್ತಿದೆ.
ಹವಾಯಿ ಗವರ್ನರ್ ಜೋಶ್ ಗ್ರೀನ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎಲ್ಲ ಸಾವುಗಳು ಬಯಲು ಪ್ರದೇಶಗಳಲ್ಲಿ ಸಂಭವಿಸಿವೆ. ಕಟ್ಟಡಗಳಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ ಎಂದಿದ್ದಾರೆ.
ಕೆಲವೊಂದು ಸ್ಥಳಗಳಲ್ಲಿ ಇಂಟರ್ನೆಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೂರವಾಣಿ ಕರೆಗಳು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೋಶ್ ಗ್ರೀನ್ ಅವರೊಂದಿಗೆ ಕಾಡ್ಗಿಚ್ಚಿನ ಬಗ್ಗೆ ಫೋನ್ ಮೂಲಕ ಮಾತನಾಡಿದ್ದಾರೆ. ಹವಾಯಿ ಕಾಡ್ಗಿಚ್ಚನ್ನು “ದೊಡ್ಡ ವಿಪತ್ತು” ಎಂದು ಘೋಷಿಸಿದ್ದಾರೆ. ಪ್ರೀತಿಪಾತ್ರರನ್ನು ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಫೆಡರಲ್ ವಿಪತ್ತು ಸಹಾಯ ನೀಡುವ ವಾಗ್ದಾನ ಕೂಡಾ ಮಾಡಿದ್ದಾರೆ. ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ ಮಾಯಿಯಲ್ಲಿ ತುರ್ತು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ದ್ವೀಪದಲ್ಲಿ ಲಭ್ಯವಿರುವ ಎಲ್ಲ ಕೋಸ್ಟ್ ಗಾರ್ಡ್ ಮತ್ತು ಏರ್ ಫೋರ್ಸ್ ಸಿಬ್ಬಂದಿಗೆ ಹವಾಯಿ ನ್ಯಾಷನಲ್ ಗಾರ್ಡ್ನೊಂದಿಗೆ ಕೆಲಸ ಮಾಡುವಂತೆ ಬೈಡನ್ ಆದೇಶಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.