logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಟ್ರೆಂಡಿಂಗ್
share whatsappshare facebookshare telegram
21 Apr 2023
post image

ಕಾರ್ಕಳ: ಕಾಂಗ್ರೆಸ್ ಪಕ್ಷ ರಾಷ್ಟ್ರ ಧ್ವಜ ,ಸಂವಿಧಾನದ ಪರವಿರುವ ಪಕ್ಷ ಎಂದು ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದರು. ಅವರು ಮಂಜುನಾಥ್ ಪೈ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ವಿಜಯಬ್ಯಾಂಕ್ , ಸಿಂಡಿಕೇಟ್ ಬ್ಯಾಂಕ್ ಕಳೆದುಕೊಂಡಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಯಾಕೆ ಪ್ರಶ್ನಿಸಿಲ್ಲ .ಕೊಡಗು ಭೂ ಕುಸಿತ , ಪ್ರವಾಹ , ಕೋವಿಡ್ ಸಮಯದಲ್ಲಿ ಮೃತಪಟ್ಟವರನ್ನು ಒಮ್ಮೆಯು ಪ್ರಧಾನಿ ನೆನಪಿಸಲಿಲ್ಲ, ಪರಿಹಾರನೀಡಲಿಲ್ಲ , ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ ಯನ್ನು ಪ್ರಶ್ನಿಸಿದರು. ದ್ವೇಷ ಅಸೂಯೆ ಸೃಷ್ಟಿಸುವುದೇ ಬಿಜೆಪಿ ಕೆಲಸ ,ಗಾಂಧೀಜಿಯನ್ನು ಕೊಂದ ದೇಶದ ಮೊದಲ ಭಯೋತ್ಪಾದಕನೆ ನಾಥುರಾಂ ಗೋಡ್ಸೆ . ಅವರನ್ನು ಪೂಜಿಸುವವರು ಬಿಜೆಪಿಯವರು ಅವರಿಗೆ ಬೆಂಬಲಿಸಬೇಡಿ . ಶಿಕ್ಷಣ ,ಆರೋಗ್ಯ, ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ಪಕ್ಷಕ್ಕೆ ಬೆಂಬಲ‌ನೀಡಿ . ಮುಖ್ಯ ಮಂತ್ರಿ ಸೀಟ್ 2500 ಕೋಟಿ , ಮಂತ್ರಿಯಾಗಬೆಕಾದರೆ 100 ಕೋಟಿ ನೀಡಬೇಕೆಂದು ಬಿಜೆಪಿ ಪಕ್ಷದ ಬಸರಾಜ್ ಪಾಟೀಲ್ ಯತ್ನಾಳ್ ಆರೋಪವೆ ಸಾಕ್ಷಿ ಎಂದರು.

ಜಿಲ್ಲಾ ಉಸ್ತುವಾರಿ ರೋಜಿ ಜಾನ್ ಮಾತನಾಡಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರತಿಯೊಂದು ಟೆಂಡರ್ ನಲ್ಲಿ 40% ಕಮಿಷನ್ ನೀಡಬೇಕು. ಅದ್ದರಿಂದ ಪೆ ಸಿಂ ‌ ಮಾಡಲಾಗಿದೆ ಅವರನ್ನು ಕೆಳಗಿಸಿ , ಪಿ ಎಸ್ ಐ ಸ್ಕ್ಯಾಂ , ಕೆಪಿಟಿಸಿ ಎಲ್ ಸ್ಕ್ಯಾಂ , ಮೈಸೂರಿನ ಸ್ಯಾಂಡಲ್ ಸ್ಕ್ಯಾಂ ಮಾಡಿ ಜನರನ್ನು ಲೂಟಿ ಮಾಡಿದೆ .ಹಿಂದುತ್ವ ಹೇಳಿಕೊಂಡು ಬರುವ ಬಿಜೆಪಿ ಬೆಲೆ ಏರಿಕೆಯನ್ನು ಮಾಡಿ ಜನರನ್ನು ಮೂರ್ಖರನ್ನಾಗಿಸಿದೆ ಎಂದರು . ಮಮತಾ ಗಟ್ಟಿ ಮಾತನಾಡಿ ಕಾಂಗ್ರೇಸ್ ಪಕ್ಷಕ್ಕೆ ತನ್ನದೆ ಆದ ಇತಿಹಾಸ ವಿದೆ. ಎಲ್ಲ ಧರ್ಮವನ್ನು ಗೌರವಿಸುವ ಪಕ್ಷವಾಗಿದೆ ಎಂದು ಹೇಳಿದರು. ವಾಗ್ಮಿ ಸುದೀರ್ ಕುಮಾರ್ ಮರೋಳಿ ಮಾತನಾಡಿ ಸುನೀಲ್ ಕುಮಾರ್ ಹಾಗು ನಳಿನ್ ಕುಮಾರ್ ಬಿತ್ತಿದ ಮತೀಯ ಭಾವನೆಗಳನ್ನು ಕೆರಳಿಸಿದ ಪರಿಣಾಮವೇ ಪ್ರವೀಣ್ ಕುಮಾರ್ ಹತ್ಯೆಯಾಗಿದೆ. ಸುನೀಲ್ ಕುಮಾರ್ ಅವರ ಬೆನಾಮಿ ಹಗರಣಗಳ ಬಗ್ಗೆ ಮುತಾಲಿಕ್ ಅವರೆ ಹೊರಗೆಡವುತಿದ್ದಾರೆ ಅದೆಲ್ಲವೂ ಗುರು ಶಿಷ್ಯ ರ ನಡುವಿನ ಕಾಳಗ ಎಂದರು.

ಎಂ ಎಲ್ ಸಿ ಮಂಜುನಾಥ್ ಭಂಡಾರಿ ಮಾತನಾಡಿ , ರಾಷ್ಟ್ರ ಭಕ್ತ ಗಾಂಧಿ ಜಿ ಕೊಂದವರನ್ನು, ಧರ್ಮ ಧರ್ಮದ ನಡುವಿನ ಕಿಚ್ಚು ಹಚ್ಚುವವರನ್ನು ,ಬೆಲೆ ಏರಿಕೆ ಯನ್ನು ಮಾಡಿದ ಬಿಜೆಪಿ ಯನ್ನು ಬೆಂಬಲಿಸಬೇಡಿ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಸ್ತಾವಿತ ಮಾತನಾಡಿ ಸರಕಾರದ ಸಿಮೆಂಟ್ ಹಗರಣ , ಆಹಾರ ಕಿಟ್ ಹಗರಣವನ್ನು ವನ್ನು ಹೊರಗೆಡವುಬೇಕು ಎಂದರು. ಭ್ರಷ್ಟಾಚಾರ ಮುಕ್ತ ಹಾಗೂ ಸೌಹಾರ್ದ ಸಮಾಜಕ್ಕಾಗಿ ಉದಯ್ ಕುಮಾರ್ ಶೆಟ್ಟಿ ಯವರನ್ನು ಬೆಂಬಲಿಸಿ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಿ , ಕಾರ್ಕಳ ಆದರ್ಶ ಕಾರ್ಕಳ ವಾಗಿ ಬದಲಾಯಿಸುವುದೆ ನಮ್ಮ ಗುರಿ ಎಂದರು.

ಸಭೆಯಲ್ಲಿ ಪ್ರಭಾಕರ್ ಬಂಗೇರ , ನೀರೆ ಕೃಷ್ಣ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ , ಪ್ರಭಾಕರ್ ಬಂಗೇರ , ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ,ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರ್ , ಮಮತಾಗಟ್ಟಿ , ಜಿಲ್ಲಾ ಪ್ರಚಾರ ಸಮಿತಿ ಹರಿಶ್ ಕಿಣಿ ,ಚಂದ್ರಶೇಖರ ಬಾಯಿರಿ , ಮೊಯಿದಿನಬ್ಬ, ದಿವಾಕರ್, ಸುಪ್ರಿತ್ ಶೆಟ್ಟಿ,ನವಿನ್ ಅಡ್ಯಂತಾಯ , ಹೆಬ್ರಿ ಪ್ರವೀಣ್ ಬಲ್ಲಾಳ್ , ಜಾರ್ಜ್ ಕಾಸ್ಟಲಿನೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಜನಿ ಹೆಬ್ಬಾರ್, ಅನಿತಾಡಿಸೋಜ, ದೀಪಕ್ ಕೋಟ್ಯಾನ್ , ಮೊದಲಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಆನಂದ ಪೂಜಾರಿ, ಚಂದ್ರಹಾಸ ಸುವರ್ಣ, ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜಿಲ್ಲಾ ಮಾಧ್ಯಮ ವಕ್ತಾರ ಬಿಪಿನ್ ಚಂದ್ರ , ಕಾರ್ಯಕ್ರಮ ನಿರೂಪಿಸಿದರು. ರಮ್ಯ ಸುಧೀಂದ್ರ ಹಾಗೂ ಶಿವಕುಮಾರ್ ಬಳಗದಿಂದ ದೇಶಭಕ್ತಿ ಗೀತೆಗಳನ್ನೂ ಹಾಡಲಾಯಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.