



ಮಡಿಕೇರಿ ಸಂಪಾಜೆ ನಡುವಿನ ಕೊಯಿನಾಡು ಸಮೀಪ ರಸ್ತೆ ಅರುಕು ಬಿಟ್ಟದ್ದು ಸದರಿ ರಸ್ತೆಯಲ್ಲಿ ಲಘು ವಾಹನ ಸಂಚಾರ ಹೊರತುಪಡಿಸಿ ಉಳಿದಂತೆ ಇತರೆ ವಾಹನ ಸಂಚಾರಕ್ಕೆ ಸುರಕ್ಷಿತವಾಗದ ಕಾರಣ ಸ್ಥಗಿತಗೊಳಿಸಿದ್ದಾರೆ. ಇದರಿಂದ ಬೆಂಗಳೂರಿನಿಂದ ಮಂಗಳೂರಿಗೆ ತಲುಪುವ ವಾಹನಗಳ ಮಾರ್ಗ ರದ್ದಾಗಿರುತ್ತದೆ.
ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 75 (ರಾ.ಹೆ. 49) ರ ಶಿರಾಡಿ ಘಾಟ್ ನಲ್ಲಿ ಪರ್ಯಾಯ ಸಂಚಾರಕ್ಕೆ ಸಾರ್ವಜನಿಕ ಸಂಚಾರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ತುಗಳು ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಾಲ್ ವರೆಗಿನ ಭಾಗದಲ್ಲಿ ಸಂಜೆ 5 ರಿಂದ ಬೆಳಗ್ಗೆ 6 ರವರೆಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಸಂಜೆ 5ರಿಂದ ಬೆಳಗ್ಗೆ 6 ಗಂಟೆಯವರೆಗೆ ಅಂಬಾರಿ, ಡೀಮ್ ಪ್ಲಸ್ ಸ್ಟೀಪ, ನಾನ್ ಎಸಿ, ಸರ್ಕಾರಿ ಬಸ್ಸುಗಳು, ರಾಜಹಂಸ ಐರಾವತ ಸೀಪರ್, ಸ್ಪ್ಯಾನಿಯಾ ಮತ್ತು ಮಟ್ಟ ಆಕ್ವೆಲ್ ಬಸ್ ಗಳು ಮತ್ತು ತುರ್ತು ವಾಹನಗಳು ಸಂಚರಿಸಬಹುವುದಾಗಿದೆ ಎಂದು ದ.ಕ ಜಿಲ್ಲಾಡಳಿತ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.