



ಕಾರ್ಕಳ: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆಯ ಫಲಿತಾಂಶವನ್ನು 6 ಜುಲೈ 2024ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಹಾಕಿದ್ದು, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.
ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಮ ಪ್ರಕಾರವಾಗಿ ಪೂರ್ಣಚಂದ್ರ ಪಿ.ಎಚ್ 55, ಆದಿತ್ಯ ಪಾಟೀಲ್ 74, ನೇಹ. ಎನ್ 76, ಶ್ರೀ ಹರಿ 109, ಸಾನ್ವಿ ಕುಮಾರ್ 120, ಕಿಶನ್ ಬಿ ಗೌಡ 133, ಅಂಕುಶ್. ವಿ 148, ಆತ್ಮಿಕ ನಾಯಕ್ 157, ಹರಿದ್ವರ್ಣ ಸಿ ಅಸ್ವೆಪಟ್ಟೆ 162, ಸಚೇತ್ ದಯಾನಂದ್ ಬಿ.ಎಸ್ 258, ಹವನ ಎನ್ 333, ಮನ್ವಿತ ಆರ್ 346, ಸಿಂಚನ ಎಸ್ ಆಚಾರ್ಯ 374, ಹರ್ಷಲ್ ಎಸ್ ನರೋತಿ 383, ಡಿ ಎಂ ಪ್ರಜ್ವಲ್ 465, ಆರ್ ಬಿಂದು ಸೂರ್ಯ 498ನೇ ಸ್ಥಾನವನ್ನು ಗಳಿಸಿದ್ದಾರೆ.
ಒಟ್ಟು ಫಲಿತಾಂಶದಲ್ಲಿ 100ರ ಸ್ಥಾನದೊಳಗೆ 7, 200ರ ಒಳಗೆ 19, 300ರ ಒಳಗೆ 26, 400 ರ ಒಳಗೆ 36, 500ರ ಒಳಗೆ 40 ವಿದ್ಯಾರ್ಥಿಗಳು ಸ್ಥಾನವನ್ನು ಗಿಟ್ಟಿಸಿ ಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಸಂಯೋಜಕರಾದ ಸುಮಂತ್ ದಾಮ್ಲೆ ರವರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.