



ಮಂಗಳೂರು: ಕ್ರೆಡಾಯ್ - ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಯೇಷನ್ ಆಫ್ ಇಂಡಿಯಾ, ದೊಡ್ಡ ಮತ್ತು ಸಣ್ಣ ಪ್ರಾಪರ್ಟಿ ಡೆವಲಪರ್‍ಗಳ ಸ್ಥಾಪಿತ ರಾಷ್ಟ್ರೀಯ ಸಂಸ್ಥೆಯಾಗಿದೆ.
ಮಂಗಳೂರು ಪ್ರಾಂತ್ಯದಲ್ಲಿ 75ಕ್ಕೂ ಹೆಚ್ಚು ಸಕ್ರೀಯ ಸದಸ್ಯರನ್ನು ಒಳಗೊಂಡಿದೆ, ಅವರು ಮಂಗಳೂರು ಮತ್ತು ಸುತ್ತಮುತ್ತಲಿನ ನೂರಾರು ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಪ್ರಾಪರ್ಟಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಿರ್ಮಾಣ ಉದ್ಯಮವನ್ನು ಪುರುಷ-ಪ್ರಾಬಲ್ಯದ ವ್ಯಾಪಾರವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ, ಕ್ರೆಡಾಯ್ ಕೂಡಾ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸುವಂತೆ ಹೊಸ ಹೆಜ್ಜೆಯನ್ನಿಟ್ಟಿದೆ. ಮಹಿಳೆಯರು ಸಮಾಜ ಮತ್ತು ವ್ಯಾಪಾರ ಸಂಸ್ಕøತಿಯ ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿದ್ದಾರೆ. ಕೆಲಸದ ಸ್ಥಳದಲ್ಲಿ ಮಹಿಳೆಯರು ತಮ್ಮದೇ ಆದ ದೃಷ್ಟಿಕೋನಗಳು ಮತ್ತು ಸಾಮಥ್ರ್ಯವನ್ನು ಹೊಂದಿದ್ದಾರೆ. ಇದು ವ್ಯಾಪಾರವನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಮಂಗಳೂರಿನಲ್ಲಿ ತನ್ನದೇ ಆದ ಮಹಿಳಾ ವಿಭಾಗವನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಕ್ರೆಡಾಯ್ ನಂಬಿದೆ.
ಕ್ರೆಡಾಯ್ ರಾಷ್ಟ್ರೀಯ ಮಟ್ಟ ಸೇರಿದಂತೆ ಎಲ್ಲಾ ಹಂತಗಳಲ್ಲಿ ಮಹಿಳಾ ವಿಂಗ್ ಅನ್ನು ಜಾರಿಗೆ ತಂದಿದೆ ಹಾಗೂ ಮಹಿಳೆಯರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಪರಿವರ್ತಿಸುವ ದೃಢವಾದ ಯೋಜನೆಯನ್ನು ಹೊಂದಿದೆ. ಕ್ರೆಡಾಯ್ ರಿಯಲ್ ಎಸ್ಟೇಟ್ ಉದ್ಯಮವನ್ನು ಲಿಂಗ-ತಟಸ್ಥಗೊಳಿಸುವ ಗುರಿಯನ್ನು ಹೊಂದಿದೆ. ಇದು ಬಲವಾದ ನೆಟ್‍ವರ್ಕಿಂಗ್ ಒದಗಿಸಿ, ಈ ಉದ್ಯಮದಲ್ಲಿ ಹೆಚ್ಚು ಸಕ್ರಿಯ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಉತ್ತಮ ಕಾರ್ಯಕ್ರಮಗಳನ್ನು ರಚಿಸುತ್ತದೆ.
ಮೊದಲ ಮಹಿಳಾ ವಿಭಾಗವನ್ನು 2016ರಲ್ಲಿ ಪುಣೆಯಲ್ಲಿ ಉದ್ಘಾಟಿಸಲಾಯಿತು ಮತ್ತು ಇಂದು ದೇಶಾದ್ಯಂತ 75ಕ್ಕಿಂತಲೂ ಹೆಚ್ಚು ಮಹಿಳಾ ವಿಭಾಗಗಳು ವ್ಯಾಪಾರವನ್ನು ನಿರ್ವಹಿಸಲು ಸಿದ್ಧವಾಗಿವೆ. ಕ್ರೆಡಾಯ್ ಮಂಗಳೂರು ಸಿಟಿ ವಿಭಾಗವು 2018ರಲ್ಲಿ ರೂಪುಗೊಂಡಿತು ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ನಗರದಲ್ಲಿ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಅಪಾರ ಗೌರವವನ್ನು ಗಳಿಸಿದೆ.
ಪ್ರಸ್ತುತ ಅಧ್ಯಕ್ಷರಾದ ಶ್ರೀ ವಿನೋದ್ ಪಿಂಟೊ ಮತ್ತು ಅವರ ತಂಡ ಮಂಗಳೂರಿನಲ್ಲಿ ಮಹಿಳಾ ವಿಭಾಗವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ರೆಡಾಯ್ ಮಹಿಳಾ ವಿಭಾಗದ ಉದ್ಘಾಟನೆ ಮತ್ತು ಸ್ಥಾಪನೆಯು ಸೆಪ್ಟೆಂಬರ್ 27, 2023ರಂದು ಬುಧವಾರ ಸಂಜೆ 7.00 ಗಂಟೆಗೆ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ ನಡೆಯಲಿರುವುದು.
2023-25ರ ಅವಧಿಗೆ ನಾರ್ದರ್ನ್ ಸ್ಕೈ ಪ್ರಾಪರ್ಟೀಸ್‍ನ ನಿರ್ದೇಶಕಿಯಾದ ಶ್ರೀಮತಿ ಕೃತೀನ್ ಅಮೀನ್ ಅವರನ್ನು ಕ್ರೆಡಾಯ್ ಮಹಿಳಾ ವಿಭಾಗದ ಸಂಯೋಜಕರಾಗಿ, ಪ್ಯಾರಡೈಸ್ ಪ್ರಾಪರ್ಟೀಸ್ ಪ್ರತಿನಿಧಿಸುವ ಶ್ರೀಮತಿ ರಜನಿ ಲೋಬೊ ಪತ್ರಾವೊ ಕಾರ್ಯದಶಿಯನ್ನಾಗಿ ನಿಯೋಜಿಸಿಲಾಗಿದೆ. ಗೌರವಾನ್ವಿತ ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಕ್ರೆಡಾಯ್ ಕರ್ನಾಟಕ ಅಧ್ಯಕ್ಷರಾದ ಶ್ರೀ ಪ್ರದೀಪ್ ರಾಯ್ಕರ್ ಮತ್ತು ಛಿತಿತಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಸಾರಾ ಜಾಕೊಬ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.