



ನವದೆಹಲಿ; ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ .ಇಂದು ಪ್ರತಿ ಬ್ಯಾರೆಲ್‌ಗೆ 107 ಡಾಲರ್‌ಗಿಂತ ಮೇಲಕ್ಕೇರಿದೆ ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿತ್ತು. ಇದಾದ ಬಳಿಕ ಪೆಟ್ರೋಲ್ 8 ರು ಪ್ರತಿ ಲೀಟರ್ ಹಾಗೂ ಡೀಸೆಲ್ 6 ರು ಪ್ರತಿ ಲೀಟರ್ ತಗ್ಗಿತ್ತು. ನಂತರ ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ.ದಿನನಿತ್ಯ ಕಚ್ಚಾತೈಲ ಬೆಲೆ ಪರಿಷ್ಕರಿಸುದರಿಂದ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣುವುದು ಖಚಿತ ವಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.