



ಉಡುಪಿ: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ ಇದರ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಇದರ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ 'ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯರೋಗ ಮತ್ತು ಕೊರೋನ ಮಹಾಮಾರಿ ಕುರಿತು ಮಾಹಿತಿ' ನೀಡುವ ಜಾನಪದ ಕಲಾ ಪ್ರದರ್ಶನ ಹಾಗು ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಕಾರ್ಯಕ್ರಮವು ಮಣಿಪಾಲದ ಟೈಗರ್ ಸರ್ಕಲ್ ನಲ್ಲಿ ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಡಾ.ಗೌರಿಯವರ ಮುಖೇನ ಉದ್ಘಾಟಿಸ್ಪಟ್ಟಿತು. ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ ಇದರ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಶೆಣೈ, ತಾಲ್ಲೂಕು ಶಿಕ್ಷಣಾಧಿಕಾರಿ ಶ್ರೀಮತಿ ಚಂದ್ರಕಲಾ, ರೋಟರಿ ಮಣಿಪಾಲ್ ಅಧ್ಯಕ್ಷರಾದ ಡಾ.ವಿರೂಪಾಕ್ಷ ದೇವರಮನೆ, ರೊಟೇರಿಯನ್ ಶ್ರೀಪತಿ, ಯುಪಿಎಂಸಿ ಯ ವಾಣಿಜ್ಯ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಜಿ.ಜಿ, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್, ಬೀದಿ ನಾಟಕದ ನಿರ್ದೇಶಕರಾದ ರಾಮಾಂಜಿ ನಮ್ಮಭೂಮಿ, ಸಂಚಾಲಕರಾದ ಶಿಲ್ಪ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ಹಾಗೆಯೇ ಬೀದಿನಾಟಕದ ವಿದ್ಯಾರ್ಥಿಗಳಾದ ಚಿಣ್ಣಪ್ಪ, ಹರ್ಷಿತ್ ವಿ ಶೆಟ್ಟಿ, ಹಿಮಲ್ ಕುಮಾರ್, ಪ್ರಾಕ್ಷ, ದೀಕ್ಷಾ ಆಚಾರ್ಯ, ಯಶ್ವಿತಾ, ಸಂಗೀತಾ, ನಿಧಿ, ಶ್ರಾವ್ಯಾ, ಮನ್ವಿತ್, ನಿಖಿಲ್ ವಿವೇಕಾನಂದ್ ಎನ್ ರಚನೆಯ ಬೀದಿನಾಟಕ ನಡೆಸಿಕೊಟ್ಟರು. ಹಾಗೆಯೇ ಇದೇ ತಂಡದಿಂದ 20 ಪ್ರದರ್ಶನಗಳು ಜಿಲ್ಲೆಯಾದ್ಯಂತ ನಡೆಯಲಿದೆ. ಪ್ರತಿಷ್ಠಾನದ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ ಸ್ವಾಗತಿಸಿ ನಿರೂಪಿಸಿದರು, ಕಲಾವಿದೆ ಶಿಲ್ಪ ಜೋಶಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.