



ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು, ಮನೆಯಲ್ಲಿ ಬೈತಾರೆ ಅನ್ನೋ ಕಾರಣಕ್ಕೆ ಮಕ್ಕಳು ಮನೆ ಬಿಟ್ಟು ಹೋಗುವುದು ಸಾಮಾನ್ಯ, ಆದರೆ ಬೆಂಗಳೂರಿನ ಇಬ್ಬರು ಸಹೋದರಿಯರು ಅಪ್ಪ ಚಾಕೊಲೇಟ್ ಕೊಡಿಸ್ಲಿಲ್ಲ ಅನ್ನೋ ಕಾರಣಕ್ಕೆ, ಮನೆ ಬಿಟ್ಟು ಊರೂರು ಸುತ್ತಿದ್ದಾರೆ. ಅದ್ರಲ್ಲೂ ಅವರಿಗೆ ಸಹಾಯ ಮಾಡಿದ್ದು ಫ್ರೀ ಬಸ್.
ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಹೋದರಿಯಬ್ಬರು ಚಾಕೊಲೇಟ್ ಕೊಡಿಸುವಂತೆ ತಂದೆಗೆ ದುಂಬಾಲು ಬಿದ್ದಿದ್ದಾರೆ. ಈ ವಿಷಯಕ್ಕೆ ತಂದೆ ರೇಗಾಡಿದ್ದರು. ಬಳಿಕ ಕಳೆದ ಜೂನ್ 16 ರಂದು ಅಕ್ಕ – ತಂಗಿ ನಾಪತ್ತೆ ಆಗಿದ್ದರು. 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿದ್ದ ಸಹೋದರಿಯರು ಹೀಗೆ ಏಕಾಏಕಿ ಕಾಣದೆ ಇದ್ದಾಗ ಪೋಷಕರು ಗಾಬರಿಗೊಂಡು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹುಡುಗಿಯರ ಪತ್ತೆಗಾಗಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಫ್ರೀ ಬಸ್‌ವೊಂದು ಹುಡುಗಿಯರ ಸುಳಿವು ನೀಡಿತ್ತು. ಸುಳಿವು ಹಿಡಿದು ಹೋದ ಪೊಲೀಸರಿಗೆ ಬೆಂಗಳೂರಲ್ಲಿ ನಾಪತ್ತೆಯಾದವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಸಿಕ್ಕರು.
ಮನೆ ಬಿಟ್ಟು ಬಂದಿದ್ದ ಸಹೋದರಿಯರು, ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಬಂದಿದ್ದರು. ಬಸ್ ಪ್ರಯಾಣ ಫ್ರೀ ಇರೋದರಿಂದ ಎಲ್ಲಿ ಬೇಕಾದರೂ ಓಡಾಡಬಹುದು ಎಂಬ ಹುಂಬತನದಲ್ಲಿ ಸಹೋದರಿಬ್ಬರು ಮನೆಯವರನ್ನು ಆತಂಕಕ್ಕೆ ದೂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.