logo
WhatsApp Image 2026-04-02 at 14.46.04.jpeg
hindalco everlast.jpeg

ಪಶು ಆಹಾರ ಬೆಲೆ ಏರಿಕೆ, ನಷ್ಟದಿಂದ ಹೈನುಗಾರರು ಹೈರಾಣು

ಟ್ರೆಂಡಿಂಗ್
share whatsappshare facebookshare telegram
23 Oct 2022
post image

(ರಾಮ್ ಅಜೆಕಾರು, ಕಾರ್ಕಳ) ಮಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಪಶು ಅಹಾರದ ದರವು ನಿರಂತರ ಏರಿಕೆಯಾಗುತ್ತಿದ್ದು, ಹೈನುಗಾರರು ಹಾಲು ಉತ್ಪಾದನೆಯ ಖರ್ಚು ಮತ್ತು ಆದಾಯವನ್ನು ಸರಿದೂಗಿಸಲಾಗದೇ ಹೈರಣಾಗಿದ್ದಾರೆ. ಪಶು ಅಹಾರವಾದ ಒಣ ಹುಲ್ಲು, ಜೋಳದ ಕಡ್ಡಿ, ಬೂಸ ಶೇಂಗಾ, ಹಿಂಡಿ ಇತ್ಯಾದಿಗಳ ದರ ಹೆಚ್ಚಳವಾಗಿರುವುದರಿಂದ ಹಾಲು ಉತ್ಪಾದಕರ ಮೇಲೆ ಅದರ ನೇರ ಪರಿಣಾಮ ಬೀರುತ್ತಿದೆ . ಹಾಲು ಒಕ್ಕೂಟಗಳು ಉತ್ಪಾದಕರಿಂದ ಗುಣಮಟ್ಟದ ಹಾಲಿಗೆ ಪ್ರ, ಸರ್ಕಾರ ಪ್ರತಿ ಲೀಟರ್ ಗೆ 5 ರೂ ಪ್ರೋತ್ಸಾಹ ಧನ ಸೇರಿ ‌36 ರೂ ನೀಡಲಾಗುತ್ತಿದೆ ಮಾರುಕಟ್ಟೆ ಯಲ್ಲಿ ಈಗ ನಂದಿನಿ ಹಾಲಿನ ದರವು ಪ್ರತಿ ಲೀಟರ್ 44 ರು. ಯಾಗಿದ್ದು, ಇದರಿಂದ ಅಗುವ ನಷ್ಟವನ್ನು ಸರಿದೂಗಿಸಲಾಗದೆ ಹೈನುಗಾರರು ಕಸುಬಿನಿಂದಲೇ ದೂರವಾಗುತಿದ್ದಾರೆ. ಈ ಬಾರಿ ಹೆಚ್ಚಿದ ಮಳೆಯಿಂದಾಗಿ ಶೆಂಗಾ ಹಿಂಡಿ, ಜೋಳ, ಹತ್ತಿ ಹಿಂಡಿ , ಡಿಒಅರ್ ಬಿ ಉತ್ಪಾದನೆ ಕುಂಠಿತವಾಗಿದ್ದು, ಬೆಲೆ ಕಳೆದ 8 ತಿಂಗಳಿಂದ ತೀವ್ರ ಏರುಗತಿಯಲ್ಲಿದೆ ನಂದಿನಿ ಗೋಲ್ಡ್ ಜೂನ್ ನಲ್ಲಿ 50 ಕಿಲೋಗೆ 990 ರು, ಇದ್ದರೇ, ಸೆಪ್ಟೆಂಬರ್ ತಿಂಗಳಲ್ಲಿ 1065 ರು.ಗಳಾಗಿದ್ದು, ಅ.19 ರಂದು 1190 ರು.ಗೆ ಏರಿಕೆಯಾಗಿದೆ. 4 ತಿಂಗಳಲ್ಲಿ 210 ರು.ಗಳಷ್ಟು ಹೆಚ್ಚಿದ್ದು, ಸದ್ಯ. ನಂದಿನಿ ಬೈಪಾಸ್ ಪಶು ಅಹಾರಬೆಲೆ 1310 ರು.ಗಳಾಷ್ಟಾಗಿದೆ.

ಲೀಟರಿಗೆ 50 ರು.ಗಳಾದರೂ ಕೊಡಿ ಒಣಹುಲ್ಲು ಕೊರತೆ, ಬೆಲೆ ಹೆಚ್ಚಳ, ಹಸುಗಳ ಅರೋಗ್ಯ ಸಮಸ್ಯೆಯಿಂದಾಗಿ ಹೈನುಗಾರರು ಕಂಗಾಲಾಗಿದ್ದಾರೆ. ಹೈನುಗಾರರನ್ನು ಮತ್ತು ಹೈನುಗಾರಿಕೆಯನ್ನು ಉಳಿಸಬೇಕಾದರೇ ಸರ್ಕಾರವು ಹಾಲಿನಪ್ರೋತ್ಸಾಹ ಧನ ಪ್ರತಿ ಲೀಟರ್ ಗೆ 50 ರು.ಗಳಗಾದಾರೂ ಏರಿಸಬೇಕು. ರಂಜಿತ್ ಹಾಲು ಉತ್ಪಾದಕರು ಉಡುಪಿ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.