



ಬೆಂಗಳೂರು : ಬೆಂಗಳೂರಿನಲ್ಲಿ 37 ವರ್ಷದ ಮಹಿಳೆಯೊಬ್ಬಳು ಡೇಟಿಂಗ್ ಆಪ್ ನಲ್ಲಿ ಮಾಡಿ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಆಸ್ಟಿನ್ ಪಟ್ಟಣದ ನಿವಾಸಿಯಾದ ಮಹಿಳೆ ಐದು ದಿನಗಳ ಅವಧಿಯಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ .ಸೆಪ್ಟೆಂಬರ್ 30 ರಂದು ಡೇಟಿಂಗ್ ಆಪ್ ನಲ್ಲಿ ಪರಿಚಯ ವಾಗಿದ್ದರು. ವಿದೇಶದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡ ವ್ಯಕ್ತಿ, ಅವಳನ್ನು ಮದುವೆಯಾಗಲು ಆಸಕ್ತಿ ವಹಿಸಿದ್ದು ಆತ ಶೀಘ್ರದಲ್ಲೇ ಭಾರತಕ್ಕೆ ಆಗಮಿಸುವುದಾಗಿ ಹೇಳಿದನು.
ತಾನು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದಾನೆ ಎಂದು ಹೇಳಿಕೊಂಡು ಆಕೆಯಿಂದ ಅನೇಕ ಹಣದ ವಹಿವಾಟು ನಡೆಸಿದ್ದ , ಆಕೆ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಳ್ಳುವ ಮೊದಲು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 18,29,700 ರೂ. ಕಳುಹಿಸಿದ್ದಾಳೆ. ಇದರ ಬಗ್ಗೆ ಸೆಂಟ್ರಲ್ ಸೆನ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.