logo
WhatsApp Image 2026-04-02 at 14.46.04.jpeg
hindalco everlast.jpeg

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆ ಸೋಲು ಖಚಿತ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್

ಟ್ರೆಂಡಿಂಗ್
share whatsappshare facebookshare telegram
21 Dec 2022
post image

ಕಾರ್ಕಳ:

ಮುಂದಿನ ಚುನಾವಣೆಯಲ್ಲಿ ಸೋಲು ಖಚಿತವೆಂದು ಮನಗಂಡಿರುವ ಬಿಜೆಪಿ ಆ ಭೀತಿಯಲ್ಲಿ ಮತದಾರರ ಪಟ್ಟಿ ಕದಿಯಲು ನೋಡಿ ಸಿಕ್ಕಿಬಿದ್ದು ಮಾನ ಕಳೆದುಕೊಂಡು ಇದೀಗ ಮತ್ತೆ ಕಾಂಗ್ರೆಸ್ ನಾಯಕರನ್ನು ಹಣಿಯಲು ಐಟಿ ಇಡಿಗೆ ಶರಣಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದ್ದಾರೆ. ಅವರು ಇಲ್ಲಿನ ಕಟೀಲ್ ಇಂಟರ್ ನೇಶನಲ್ ಹೋಟೇಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮತ್ತು ಹೆಬ್ರಿ ಆಯೋಜಿಸಿದ್ದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಕಾರ್ಕಳ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸುಭದ್ರ ನೆಲೆಯಾಗಿದ್ದ ಹೊರತಾಗಿಯೂ ಬಿಜೆಪಿ ತನ್ನ ಅಪರ ರಾಜನೀತಿಯ ತಂತ್ರಗಾರಿಕೆಯಿಂದ ಗೆಲುವು ಸಾಧಿಸುತ್ತಿರುವುದು ವಿಷಾದನೀಯ. ಎದುರಾಳಿಗಳ ವೈಫಲ್ಯವನ್ನು ಬಳಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕು. ಅಭಿವೃದ್ದಿಯ ಸೋಗಿನಲ್ಲಿ ಇಲ್ಲಿನ ಶಾಸಕ ಸಚಿವ ಸುನೀಲ್ ಕುಮಾರ್ ಹಾಗೂ ಅವರ ಅನುಯಾಯಿಗಳು ಮಾಡಿರುವ ಭ್ರಷ್ಟಾಚಾರವನ್ನು ಮನೆಮನೆಗಳಿಗೆ ತಲಪಿಸ ಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಬೇಕು ಎಂದು ಎಂದು ತಿಳಿಸಿದರು. ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಮೈಸೂರು ವಿಭಾಗ ಉಸ್ತುವಾರಿ ರೋಜಿ ಜಾನ್ ಮಾತಾಡಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬೇಂಕಿಗೆ ಕಣ್ಣಿಟ್ಟಿರುವ ಬಿಜೆಪಿ ಧರ್ಮ ಮತ್ತು ಆಮಿಷದ ಹೆಸರಲ್ಲಿ ಇದನ್ನು ಒಡೆಯಲು ನೋಡುತ್ತಿದೆ. ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ವಾಸ್ತವತೆಯನ್ನು ಜನರ ಮುಂದಿಟ್ಟು ಇದನ್ನು ಎದುರಿಸುವುದು ಇಂದಿನ ಆಧ್ಯತೆಯಾಗಿದೆ ಎಂದು ಹೇಳಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಟರ್ ಕೊಡವೂರು ಪ್ರಸ್ತಾವನೆ ಗೈದರು. ಕ್ಷೇತ್ರ ಉಸ್ತುವಾರಿ ಮಮತಾ ಗಟ್ಟಿ ಬೂತ್ ಮಟ್ಟದ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ದೀಪಕ್ ಕೋಟ್ಯಾನ್, ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ರೋಷನ್ ಶೆಟ್ಟಿ, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯಾನಂದ, ಡಿ.ಅರ್. ರಾಜು, ಕೆಪಿಸಿಸಿ ಸದಸ್ಯ ಕೃಷ್ಣ ಶೆಟ್ಟಿ , ಸುರೇಂದ್ರ ಶೆಟ್ಟಿ ಉಪಸ್ಥಿತರಿದಗದು ಸಂದರ್ಭೋಚಿತ ಮಾತಾಡಿದರು ಅಧ್ಯಕ್ಷ ಸದಾಶಿವ ದೇವಾಡಿಗ ಸ್ವಾಗತಿಸಿ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಗೈದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.