



ನವದೆಹಲಿ: ಟ್ವಿಟರ್ ನಿಂದ ಹಿಂದೂ ದೇವತೆಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ,ಸಾಮಾನ್ಯ ಜನರ ಭಾವನೆಗಳನ್ನು ಟ್ವಿಟರ್ ಗೌರವಿಸಬೇಕು. ಸಾಮಾನ್ಯ ಜನರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಈ ರೀತಿ ಆಕ್ಷೇಪಾರ್ಹ ಫೋಟೋಗಳನ್ನು ಏಕೆ ಹಾಕುತ್ತೀರಿ? ಇದನ್ನು ಕೂಡಲೇ ತೆಗೆದುಹಾಕಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ಹೇಳಿದೆಅರ್ಜಿದಾರ ಆದಿತ್ಯ ಸಿಂಗ್ ದೇಶಪಾಲ್ ಅವರು ಕಾಳಿ ಮಾತೆಯ ಬಗ್ಗೆ ಅಸಹ್ಯಕರ ಪೋಸ್ಟ್ ಗಳನ್ನು ಟ್ವಿಟರ್ ನಲ್ಲಿ ಹಾಕಲಾಗಿದೆ. ಅತಿರೇಕದ ಮತ್ತು ಅವಮಾನಕರ ರೀತಿಯಲ್ಲಿ ದೇವರನ್ನು ಚಿತ್ರಿಸಲಾಗಿದೆ ಎಂದು ದೂರು ನೀಡಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ಪೊದ್ದಾರ್ ಅವರು ವಾದ ಮಂಡಿಸಿ, ಮಾಹಿತಿ ತಂತ್ರಜ್ಞಾನ ನಿಯಮಗಳ ಉಲ್ಲಂಘನೆ ಇದಾಗಿದೆ. ನಿಯಮಗಳನ್ನು ಟ್ವಿಟರ್ ಅನುಸರಿಸಿಲ್ಲ ಎಂದು ದೂರಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.