



ನವದೆಹಲಿ: ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಷ್ಟ್ರ ರಾಜಧಾನಿ ತತ್ತರಿಸಿದೆ. ದೆಹಲಿ ನಗರದ ಬಹುತೇಕ ಸ್ಥಳಗಳು ಜಲಾವೃತಗೊಂಡಿದ್ದು, ನೀರು ಸುಪ್ರೀಂ ಕೋರ್ಟ್ ಆವರಣವನ್ನೂ ತಲುಪಿದೆ.
ಭಾರೀ ಮಳೆಯಿಂದಾಗಿ ನಗರದಲ್ಲಿ ನೀರಾವರಿ ಇಲಾಖೆಯ ಸಂಸ್ಕರಣಾ ಘಟಕಗಳು ಕೆಟ್ಟಿರುವುದರಿಂದ ಕುಡಿಯುವ ನೀರಿಗೆ ತತ್ವಾರವಾಗಿದೆ. ಶೇ.25ರಷ್ಟು ನೀರಿನ ಸರಬರಾಜು ಕಡಿಮೆಯಾಗಲಿದೆ.
ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‌ನಲ್ಲಿ ನೀರಿನ ಹರಿವಿನ ಪ್ರಮಾಣ 80,000 ಕ್ಯುಸೆಕ್‌ಗೆ ಇಳಿದಿದೆ. ಸದ್ಯ ನೀರಿನ ಮಟ್ಟ ಸ್ಥಿರವಾಗಿದೆ ಎಂದು ಕೇಂದ್ರ ನೀರಾವರಿ ಸಮಿತಿಯ ನಿರ್ದೇಶಕ ಶರದ್ ಚಂದ್ರ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಅಗತ್ಯ ಸೇವೆಗಳನ್ನು ಒದಗಿಸುವುದನ್ನು ಹೊರತುಪಡಿಸಿ ಭಾರೀ ವಾಹನಗಳ ನಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಯಮುನಾ ನದಿ ಅಪಾಯ ಮಟ್ಟದಲ್ಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ಯಮುನಾ ಸೇತುವೆಗಳ ಮೇಲೆ ಹಾದು ಹೋಗುವ ಮೆಟ್ರೊ ರೈಲುಗಳ ವೇಗವನ್ನು 30 ಕಿ.ಮೀಟರ್‌ಗೆ ನಿರ್ಬಂಧಿಸಲಾಗಿದೆ ಎಂದು ದೆಹಲಿ ಮೆಟ್ರೊ ನಿಗಮ ತಿಳಿಸಿದೆ.
ಶುಕ್ರವಾರ ಬೆಳಗ್ಗೆ ಯಮುನಾ ನದಿಯ ನೀರು ರಾಜ್‌ಘಾಟ್, ಸುಪ್ರೀಂ ಕೋರ್ಟ್‌ವರೆಗೂ ತಲುಪಿದೆ. ಸುಪ್ರೀಂ ಕೋರ್ಟ್ ಬಳಿಯ ಮಥುರಾ ರಸ್ತೆ ಮತ್ತು ಭಗವಾನ್ ದಾಸ್ ರಸ್ತೆಯ ಕೆಲವು ಭಾಗಗಳಿಗೂ ಪ್ರವಾಹದ ನೀರು ನುಗ್ಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.