



ಕಾರ್ಕಳ : ಸಾಮಾಜಿಕ-ಆರ್ಥಿಕ ರಚನೆಯಲ್ಲಿ, ರೈತರು ಸಮಾಜದ ಬೆನ್ನೆಲುಬು. ನಾವು ತೆಗೆದುಕೊಳ್ಳುವ ಬಹುತೇಕ ಎಲ್ಲಾ ಆಹಾರ ಪದಾರ್ಥಗಳನ್ನು ರೈತರು ಉತ್ಪಾದಿಸುತ್ತಾರೆ. ಹೀಗಾಗಿ ದೇಶದ ಇಡೀ ಜನಸಂಖ್ಯೆ ರೈತರ ಮೇಲೆ ಅವಲಂಬಿತವಾಗಿದೆ. ಸರಕಾರವು ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದಾಗಿ ರೈತರು ಆರ್ಥಿಕ ವಾಗಿ ಬಲವರ್ಧನೆ ರೂಪಿಸಲು ಸರಕಾರ ಪಣತೊಡುತ್ತಿದೆ.
ರೈತರಿಗೆ ಬೇಕಾದ ಸವಲತ್ತುಗಳನ್ನು, ಯೋಗ್ಯ ಮಾಹಿತಿಯನ್ನು, ಹಾಗೆ ಕೃಷಿಗೆ ಸಂಬಂಧಿಸಿದ ಸಲಕರಣೆಗಳನ್ನು ಒದಗಿಸುವಲ್ಲಿ ರೈತ ಸಂಪರ್ಕ ಕೇಂದ್ರ ಸದಾ ಸಿದ್ಧವಾಗಿದ್ದು ರೈತರಿಗಾಗಿ ದೊರೆಯುವ ಸವಲತ್ತುಗಳು ಈ ಕೆಳಗಿನಂತಿದೆ.
ಕೃಷಿ ಸಂಬಂಧಿತ ಸಲಹೆ ಮತ್ತು ಸೂಚನೆ : ಕೃಷಿ ಸಂಬಂಧಿತ ವಿಷಯಗಳಾದ ಉತ್ತಮ ತಳಿಯ ಬೀಜದ ಆಯ್ಕೆ , ಕ್ರಿಮಿನಾಶಕಗಳು, ನೀರಾವರಿ ವ್ಯವಸ್ಥೆ, ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡುವ ಜೊತೆಗೆ ಒಂದು ಎಕರೆ ಮತ್ತು ಅದಕ್ಕಿಂತ ಅಧಿಕ ಕೃಷಿ ಭೂಮಿ ಹೊಂದಿದ ರೈತರಿಗೆ ಕೃಷಿಯ ಸುಣ್ಣ, ಟೈಕೋಡರ್ಮಾ , ಜಿಂಕ್, ಬೋರಾಕ್ಸ್, ಗುಣಮಟ್ಟದ ಬೀಜಗಳು, ಕಪ್ಪು ಟರ್ಪಲ್ , ಸ್ಪ್ರಿಂಕ್ಲರ್, ಪೈಪು ಹೀಗೆ ಉಪಯುಕ್ತ ಸಲಕರಣೆಗಳನ್ನು ಸಬ್ಸಿಡಿ ಮೂಲಕ ರೈತರಿಗೆ ದೊರಕಿಸಿ ಕೊಡುವ ಕೆಲಸ ರೈತಸಂಪರ್ಕ ಕೇಂದ್ರ ಮಾಡುತ್ತಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ : ಈ ಯೋಜನೆಯು 2019ರಲ್ಲಿ ಅನುಷ್ಠಾನಗೊಂಡಿದ್ದು, ಸ್ವಂತ ಕೃಷಿ ಭೂಮಿ ಹೊಂದಿದ ಮತ್ತು ಆದಾಯ ತೆರಿಗೆ ಕಟ್ಟದ ಎಲ್ಲಾ ರೈತರಿಗೂ ವಾರ್ಷಿಕವಾಗಿ 6,000 ಗಳಿಸುವ ಯೋಜನೆ ಇದಾಗಿದ್ದು. ಈ ಕುರಿತು ಮಾಹಿತಿ ನೀಡುವುದರ ಜೊತೆಗೆ ಬೇಕಾದ ದಾಖಲೆಗಳನ್ನು ತಂದರೆ ಅರ್ಜಿಯನ್ನು ಇಲ್ಲಿಯೇ ಹಾಕಿಕೊಡಲಾಗುತ್ತದೆ.
ಕೃಷಿ ಸಲಕರಣೆಗಳಿಗೆ ಸಬ್ಸಿಡಿ : ಕೃಷಿ ಸಂಬಂಧಿ ಸಲಕರಣೆಗಳಾದ ಹುಲ್ಲು ಕಟಾವು ಯಂತ್ರ, ಟಿಲ್ಲರ್ , ಟ್ರ್ಯಾಕ್ಟರ್ ಮುಂತಾದ ಉಪಕರಣಗಳಿಗೆ ಸಾಮಾನ್ಯರಿಗೆ 50% ಸಬ್ಸಿಡಿ ಮತ್ತು SC, ST ವರ್ಗದ ರೈತರಿಗೆ 90% ಸಬ್ಸಿಡಿ ದೊರೆಯುತ್ತಿದ್ದು ಇದಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಅರ್ಜಿಯನ್ನು ಇಲ್ಲಿ ಹಾಕಿಕೊಡಲಾಗುತ್ತದೆ.
ಈ ರೀತಿಯಲ್ಲಿ ಕೃಷಿ ಸಂಬಂಧಿತ ಯಾವುದೇ ಮಾಹಿತಿಯನ್ನು, ರೈತ ಸಂಪರ್ಕ
ಕೇಂದ್ರದಲ್ಲಿ ನೀಡಲಾಗುತಿದ್ದು ಇದರ ಜೊತೆಗೆ ಪ್ರತೀ ಗ್ರಾಮದ ಗ್ರಾಮ ಸಭೆ, ಕೃಷಿ ಸಖಿ ಮುಂತಾದ ಹಲವಾರು ಮಾಧ್ಯಮದ ಮೂಲಕ ಮಾಹಿತಿ, ಸಲಹೆ-ಸೂಚನೆ ಮತ್ತು ಅಗತ್ಯವಾದ ಸೌಲಭ್ಯಗಳನ್ನ ಪಡೆಯಬಹುದಾಗಿದೆ.
ಶಶಾಂಕ ತೃತೀಯ ಬಿಎ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.