



ಕಾರ್ಕಳ: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾದ ಮಾನ್ಯ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ ಸಚಿವ ಸುನೀಲ್ ಕುಮಾರ್ ಭ್ರಷ್ಟಾಚಾರ ದಾಖಲೆ ಬಹಿರಂಗಪಡಿಸಬೇಕು ಇಲ್ಲವೆ ಕ್ಷಮೆಯಾಚಿಸಬೇಕು ತಪ್ಪಿದ್ದಲ್ಲಿ “PAYCM” ಮಾದರಿಯಲ್ಲಿ “SUNILPAY” ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅವರು ಕಾರ್ಕಳ ನಗರದ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ದರು.
ಸಿದ್ದರಾಮಯ್ಯರವರು ಈ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಯಾವುದೇ ಲೋಪಗಳಿಲ್ಲದ ಭ್ರಷ್ಟಾಚಾರ ರಹಿತ ಪೂರ್ಣ ಅವಧಿಯ ಆಡಳಿತ ನೀಡಿದ ಹೆಗ್ಗಳಿಕೆ ಅವರದ್ದು, ಅವರ ಜನಪರ ಯೋಜನೆಗಳಿಂದ ಕೋಟ್ಯಾಂತರ ಜನರು ನೆಮ್ಮದಿಯ ಬದುಕು ಬದುಕ್ಕಿದ್ದಾರೆ, ಅಂತವರನ್ನು ನೀವು ಮಾದರಿಯಾಗಿ ಸ್ವೀಕರಿಸಬೇಕೇ ಹೊರತು ಆದಾರ ರಹಿತ ಅರೋಪ ಮಾಡುವುದಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ
. ಸುದ್ದಿಗೋಷ್ಠಿಯಲ್ಲಿ ಮಾಜಿ ತಾ.ಪಂ ಸದಸ್ಯ ಸುಧಾಕರ್ ಶೆಟ್ಟಿ , ಸಭೆಯಲ್ಲಿ ಯೋಗೇಶ್ ಇನ್ನಾ , ಅಜಿತ್ ಹೆಗ್ಡೆ ಮಾಳ , ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.