



ಕಾರ್ಕಳ : ಬದುಕಲ್ಲಿ ಕಷ್ಟಬಂದರೂ ಧೃತಿಗೆಡದೆ ಎದುರಿಸುವ ಶಕ್ತಿ ನಮ್ಮಲ್ಲಿ ತುಂಬಿಕೊಳ್ಳುತ್ತದೆ ಭಾರತೀಯ ಸೈನ್ಯದ ವಿಶ್ರಾಂತ ಸೇನಾಧಿಕಾರಿ ಸಹದೇವ ನಾಯಕ್ ಅವರು ಹೇಳಿದರು ಶ್ರೀ ಭುವನೇಂದ್ರ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರುಷದ ಎನ್. ಎಸ್ . ಎಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸಮಯಪಾಲನೆ , ಶಿಸ್ತು ಹಾಗೂ ಸಂಯಮಗಳು ತನ್ನಿಂದಲೇ ಆಗಬೇಕು ಎಂಬ ಭಾವನೆ ಬರಬೇಕು. ಕುಂಬಾರನು ಮಣ್ಣಿನ ಮುದ್ದೆಗೆ ಮಡಕೆಯ ಆಕಾರ ಕೊಟ್ಟಂತೆ ನಾವು ಮೂಂದೇನು ಆಗಬೇಕು ಎಂದು ಯೋಚಿಸಿ ಆ ಆಕಾರ ಪಡೆಯಲು ಬೇಕಾದ ತಯಾರಿ ಮಾಡಿಕೊಳ್ಳುವ ಮನೋಸ್ಥಿತಿ ನಮ್ಮಲ್ಲಿ ಉಂಟಾದರೆ ನಾವು ಬದುಕಲ್ಲಿ ಕಷ್ಟಬಂದರೂ ಧೃತಿಗೆಡದೆ ಎದುರಿಸುವ ಶಕ್ತಿ ನಮ್ಮಲ್ಲಿ ತುಂಬಿಕೊಳ್ಳುತ್ತದೆ ಎಂದು ಹೇಳಿದರು . ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ಮಾತನಾಡಿ ಜೀವನದಲ್ಲಿ ನೈತಿಕತೆ ತುಂಬಾ ಮುಖ್ಯ. ತತ್ತ್ವ ಸಿದ್ದಾಂತಗಳ ಮೂಲಕ ಬದುಕು, ಮನೆ, ಸಮಾಜವನ್ನು ಮರುಕಟ್ಟುತ್ತಾ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಿ ಗೌರವ ಗಳಿಸಿಕೊಳ್ಳುವಂತಿರಬೇಕು ಎಂದರು. ರಾಷ್ಟ್ರೀಯ ಯುವ ಸಪ್ತಾಹದ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯಮಾರ್ಪಳ್ಳಿ , ಯೋಜನಾಧಿಕಾರಿಗಳಾದ ಸುಚಿತ್ರಾ ಹಾಗೂ ಶಿವಶಂಕರ್, ಕಾರ್ಯದರ್ಶಿಗಳಾದ ನಿರ್ಮಿತಾ ಕಿಣಿ ಹಾಗೂ ಗಣೇಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾ ಹಾಗೂ ಭಾವೈಕ್ಯತಾ ಗೀತೆಗಳನ್ನು ಹಾಡಲಾಯಿತು. ಕು. ಅಪೂರ್ವ ಸ್ವಾಗತಿಸಿ, ಈಶಾ ವಂದಿಸಿದರು. ಕು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.