



ಬೆಂಗಳೂರು: , ಬ್ರಿಟನ್ ಮತ್ತು ರಷ್ಯಾದಲ್ಲಿ ಕೊರೊನಾ ಸ್ಪೋಟಕಕ್ಕೆ ಕಾರಣವಾಗಿರುವ ಎವೈ 4.2 ಎಂಬ ಹೊಸ ರೂಪಾಂತರಿ ತಳಿ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.ಮಧ್ಯಪ್ರದೇಶದಲ್ಲಿ ಈ ಎವೈ 4.2 ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಈಗ ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಹೊಸ ತಳಿ ಇರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ, ನಂತರ ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಸೋಂಕು ಸಾವಿಗೆ ಕಾರಣವಾಗಿದ್ದ ಡೆಲ್ಟಾ ತಳಿಯ ಉಪ ತಳಿಗೆ ಎವೈ4.2 ಎಂದು ಹೆಸರಿಡಲಾಗಿದೆ.ರಷ್ಯಾ, ಇಂಗ್ಲೆಂಡ್ ಗಳಲ್ಲಿಯೂ ಕೊರೋನಾ ಹೊಸ ತಳಿ ಪತ್ತೆಯಾಗಿದೆ. ಇದೇ ಹೊಸ ತಳಿಯ ಕೊರೋನಾ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಂದಿರೋದಾಗಿ ವರದಿಯಿಂದ ತಿಳಿದು ಬಂದಿದೆ ಎಂದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.