



ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್, ಇದೀಗ ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ. ಇದರಿಂದ ಚಂದ್ರನಿಂದ ಭೂಮಿಗೆ ಸಂವಹನ ಪ್ರಕ್ರಿಯೆ ಇದರಿಂದ ಮತ್ತಷ್ಟು ಸುಲಲಿತ ಆಗಬಹುದು ಎಂದು ಆಶಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ‘ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್’ಸೆನ್ಸೆಟಿವ್ ಲೋನೋಸ್ಪಿಯರ್ ಆ್ಯಂಡ್ ಅಟ್’ಮಾಸ್ಪಿಯರ್- ಲ್ಯಾಂಗ್ ಮುಯಿರ್ ಪ್ರೋಬ್ ಉಪಕರಣವು, ಚಂದ್ರನ ಮೇಲ್ಮೈಗೆ ಸಮೀಪದ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಲೂನಾರ್ ಪ್ಲಾಸ್ಮಾ ಪರಿಸರವನ್ನು ಪತ್ತೆ ಹಚ್ಚಿದೆ’ ಎಂದು ಹೇಳಿದೆ.
ಮಾಹಿತಿಯ ಪ್ರಾಥಮಿಕ ವಿಶ್ಲೇಷಣೆ ಅನ್ವಯ, ಚಂದ್ರನ ಮೇಲ್ಮೈ ಪ್ರದೇಶದಲ್ಲಿನ ಪ್ಲಾಸ್ಮಾವು ಅತ್ಯಂತ ವಿರಳ ಪ್ರಮಾಣದಲ್ಲಿದೆ. ಅದರ ಸಾಂದ್ರತೆ ಪ್ರಮಾಣವು ಪ್ರತಿ ಕ್ಯುಬಿಕ್ ಮೀಟರ್’ಗೆ 5 ರಿಂದ 30 ದಶಲಕ್ಷ ಎಲೆಕ್ಟ್ರಾನ್’ಗಳಷ್ಟಿದೆ. ಈ ಸಂಶೋಧನೆಯು, ಲೂನಾರ್ ನಿಯರ್ ಸರ್‌ಫೇಸ್ ಪ್ರದೇಶದಲ್ಲಿನ ಅನಿಲಗಳು ಹೇಗೆ ಚಾರ್ಚ್ ಆಗುತ್ತದೆ ಎನ್ನುವ ವಿಷಯದ ಸಮಗ್ರ ಕ್ರೋಡೀಕರಣಕ್ಕೆ ನೆರವಾಗುತ್ತದೆ.
ಅಲ್ಲದೆ, ಈ ಅಧ್ಯಯನವು ಲೂನಾರ್ ಪ್ಲಾಸ್ಮಾ ಪ್ರದೇಶದಲ್ಲಿ ರೇಡಿಯೋ ಅಲೆಗಳ ಸಂವಹನ ಮೇಲೆ ಉಂಟಾಗುವ ಶಬ್ಧ ಮಾಲಿನ್ಯವನ್ನು ತಡೆಯಲು ನೆರವಾಗುತ್ತದೆ. ಜತೆಗೆ ಈ ಕುರಿತ ಜ್ಞಾನವು ಮುಂಬರುವ ಉಡ್ಡಯನಗಳ ವೇಳೆ ಇಂಥ ಶಬ್ದ ಮಾಲಿನ್ಯ ತಡೆದು ಸುಗಮ ಸಂವಹನಕ್ಕೆ ನೆರವಾಗಬಲ್ಲದು ಎಂದು ವಿಶ್ಲೇಷಿಸಲಾಗಿದೆ.
ಚಂದ್ರನಲ್ಲಿ ಪ್ಲಾಸ್ಮಾ ಪರಿಸರ ಪತ್ತೆ!
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.