



ಹೆಬ್ರಿ : ಸಾಮಾಜಿಕ ಕಳಕಳಿಯಿಂದ ಅತ್ಯಾಧುನಿಕ ಮಾದರಿಯಲ್ಲಿ ಕೃಷಿಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಮುನಿಯಾಲು ಸಂಜೀವಿನಿ ಫಾರ್ಮ್‌ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮ ನೀಡುತ್ತಿದೆ, ಮಾದರಿಯಾಗಿರುವ ಮುನಿಯಾಲು ಗೋಧಾಮ ದೇಶಕ್ಕೆ ಮಾದರಿಯಾಗಲಿದೆ. ಗೋಧಾಮಕ್ಕೆ ನೀಡಿರುವ ಭೇಟಿ ಅತ್ಯಂತ ಖುಷಿಯಾಗಿದೆ. ಯುವಜನತೆಗೆ ಪ್ರೇರಣೆಯ ಜೊತೆಗೆ ಮಾದರಿಯಾಗಿರುವ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್‌ದೇಶಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ, ಗೋಸೇವೆಯು ಅತ್ಯಂತ ಪುಣ್ಯದ ಕೆಲಸ ಎಂದು ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಮುನಿಯಾಲು ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮಕ್ಕೆ ಭಾನುವಾರ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.
ವಿಶಾಲ ಪ್ರದೇಶದಲ್ಲಿರುವ ಸಂಜೀವಿನಿ ಫಾರ್ಮ್ ಮತ್ತು ಗೋಧಾಮವನ್ನು ಸ್ವಾಮೀಜಿ ವೀಕ್ಷಣೆ ಮಾಡಿದರು.
ಮುನಿಯಾಲು ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ದಂಪತಿಗಳು ಏಕಗಮ್ಯಾನಂದ ಸ್ವಾಮೀಜಿ ಅವರನ್ನು ಗೌರವಿಸಿ ಯುವಜನತೆಯನ್ನು ಸಾವಯವ ಕೃಷಿ ಮತ್ತು ದೇಶಿಯ ಗೋತಳಿಗಳ ಹೈನುಗಾರಿಕೆಯತ್ತ ಆಕರ್ಷಿಸಿ ಬದುಕು ಕಟ್ಟಿಕೊಳ್ಳಲು ಪ್ರೇರೆಪಿಸುವ ಉದ್ದೇಶದಿಂದ ಗೋಧಾಮವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ರಾಮಕೃಷ್ಣ ಮಠದ ೬೦ ಕ್ಕೂ ಹೆಚ್ಚು ಭಕ್ತರು ಗೋಧಾಮ ಸಂದರ್ಶಿಸಿದರು. ಮುನಿಯಾಲು ಸಂಜೀವಿನಿ ಫಾರ್ಮ್‌ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಮುಖ್ಯಸ್ಥೆ ಸವಿತಾ ರಾಮಕೃಷ್ಣ ಆಚಾರ್ ಅವರನ್ನು ಸನ್ಮಾನಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.