



ಕಾರ್ಕಳ : . ಅಭಿವೃದ್ದಿ ಎಂದರೆ ಕೇವಲ ರಸ್ತೆ,ಚರಂಡಿ, ಕಟ್ಟಡ ನಿರ್ಮಾಣದಿಂದ ಮಾತ್ರ ಸೀಮಿತವಾಗಿಲ್ಲ ಸಾಂಸ್ಕೃತಿಕ ಪುನರುತ್ಥಾನವಾದರೆ ಮಾತ್ರ ಅಭಿವೃದ್ಧಿ ಎಂದು ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ ರವಿ ಹೇಳಿದರು. ಅವರು ಕಾರ್ಕಳ ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ನಿರ್ಮಿಸಲಾದ ಪರಶುರಾಮ ಥೀಂ ಪಾರ್ಕ್ ನ ಲೋಕಾರ್ಪಣ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಮಾತನಾಡಿದರು. ರಾಜಕರಣಕ್ಕಾಗಿ ಹಿಂದುತ್ವ ಅಲ್ಲ ಹಿಂದುತ್ವಕ್ಕಾಗಿ ರಾಜಕರಣ ಅಗತ್ಯವಿದೆ ಎಂದು ಇದೆ ಸಂದರ್ಭದಲ್ಲಿ ಪುನರುಚ್ಛರಿಸಿದರು ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಎಸ್.ಅಂಗಾರ ಮಾತನಾಡಿ ಇತಿಹಾಸ ಓದುವುದು ತಿಳಿಕೊಂಡು ಸಾಕಾಗದು ಅದನ್ನು ಮೈಗೂಡಿಸಿಕೊಂಡಾಗ ಅನುಷ್ಠಾನ ಗೊಳಿಸಲು ಪಯತ್ನಿಸಬೇಕು ಎಂದು ಯುವಕರಿಗೆ ಕರೆ ನೀಡಿದರು. ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಮಾತನಾಡಿ ಈ ಭೂಮಿಯಲ್ಲಿ ಧರ್ಮ ಉಳಿಯಬೇಕು. ಧರ್ಮವನ್ನು ಕಟ್ಟುವ ಕೆಲಸವಾಗಬೇಕು ಎಂದು ಧರ್ಮ ಒಡೆಯುವ ಕೆಲಸವಾಗಬಾರದು. ನನ್ನ ಸಿನಿಮಾ ರಂಗ ಭೂಮಿಕೆಗೆ ವೇದಿಕೆ ಕಲ್ಪಿಪಿಸಿದ್ದೇ ಕಾರ್ಕಳ .ಮೊದಲ ಸಿನಿಮಾ ನಿರ್ಮಾಣ ಮಾಡಿರುವುದೇ ಕಾರ್ಕಳದಲ್ಲಿ. ಪರಶುರಾಮ ಥೀಂ ಪಾರ್ಕ್ ಅದ್ಭುತ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಕರ್ ಹೆಗ್ಡೆ, ಕೇಂದ್ರ ಸಹಕಾರಿ ಮಹಾಮಂಡಲದ ರಾಜ್ಯಾಧ್ಯಕ್ಷ ಎಮ್.ಎನ್. ರಾಜೇಂದ್ರ ಕುಮಾರ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ , ಎಸ್ ಪಿ ಅಕ್ಷಯ್ ಹಾಕೆ ಮಚಿಂದ್ರ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.