



ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಇದರ ಎನ್ ಎಸ್ ಎಸ್ ಘಟಕದ ಮೇರಿ ‘ಮಾಟಿ ಮೇರಿ ದೇಶ್’ ಕಾರ್ಯಕ್ರಮದ ಅಡಿಯಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಡಿಜಿಟಲ್ ಗ್ರಂಥಾಲಯದ ಭೇಟಿ ಮತ್ತು ಅಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಉಡುಪಿ ನಗರಸಭಾ ಸದಸ್ಯರಾದ ಶ್ರೀಮತಿ ರಶ್ಮಿ ಚಿತ್ತರಂಜನ್ ಭಟ್,ಬಾಲಕಿಯರ ಪದವಿಪೂರ್ವ ಕಾಲೇಜಿನ ಕಾರ್ಯಕ್ರಮಾಧಿಕಾರಿಯಾದ ಶ್ರೀಮತಿ ಗಿರಿಜಾ ಹೆಗಡೆ,ಡಿಜಿಟಲ್ ಮುಖ್ಯ ಗ್ರಂಥಾಲಯದ ಅಧಿಕಾರಿ ಶ್ರೀಮತಿ ನಳಿನಿ ,ಶಿಕ್ಷಣ ಫೌಂಡೇಷನ್ ನ ಶ್ರೀಮತಿ ರೀನಾ ಹೆಗ್ಡೆ,ಶ್ರೀಮತಿ ನಮಿತಾ ಹಾಗೂ ಗಿಡಗಳನ್ನು ನೀಡಿದ ಮಲಬಾರ್ ಗೋಲ್ಡನ ಮೆನೇಜರ್ ಶ್ರೀ ರಾಘವೇಂದ್ರ ನಾಯಕ್ ರವರು ಉಪಸ್ತಿತರಿದ್ದರು.ಗ್ರಂಥಾಲಯದ ಆವರಣದಲ್ಲಿ ವಿಧ್ಯಾರ್ಥಿನಿಯರು ಮತ್ತು ಅತಿಥಿಗಳು ಸೇರಿ ಗಿಡ ನೆಡುವ ಮೂಲಕ ಪರಿಸರದ ರಕ್ಷಣೆಗೆ ಕೈ ಜೋಡಿಸಿದರು.ಶ್ರೀಮತಿ ರಂಜಿತಾ ,ಗ್ರಂಥಪಾಲಕರು ಡಿಜಿಟಲ್ ಲೈಬ್ರರಿ ಇವರು ವಿದ್ಯಾರ್ಥಿನಿಯರಿಗೆ ಡಿಜಿಟಲ್ ಲೈಬ್ರರಿಯ ಮಹತ್ವ ಮತ್ತು ಇಲ್ಲಿರುವ ಸೌಲಭ್ಯಗಳ ಕುರಿತು ವಿವರಿಸಿದರು.ವಿದ್ಯಾರ್ಥಿನಿಯರು ಗ್ರಂಥಾಲಯ ವಿಕ್ಷಿಸಿ ಮಾಹಿತಿ ಪಡೆದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.