



ನಕ್ಸಲ್ ನಿಗ್ರಹ ಪಡೆಯ ನೇತೃತ್ವದಲ್ಲಿ ಶ್ರೀ 48 ಪಟ್ಟಿ ಪೊರವಾಲ್ ಜೈನ ಸಂಘ ಹಾಗೂ ಶ್ರೀ 48 ಪಟ್ಟಿ ಪೊರವಾಲ್ ಜೈನ ಯುವ ಮಂಡಲ ಬೆಂಗಳೂರು ಇವರು ನೀಡಿದ ಕಲಿಕಾ ಸಾಮಗ್ರಿಗಳನ್ನು ಹಾಗೂ ಕ್ರೀಡಾ ಸಾಮಗ್ರಿಗಳನ್ನು ನಕ್ಸಲ್ ಪೀಡಿತ ಪ್ರದೇಶದ ಸರಕಾರಿ ಶಾಲೆಗಳಿಗೆ ಮಾ.11, ಮಾ.12 ರಂದು ವಿತರಿಸಲಾಯಿತು.
ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದ ಸುಮಾರು 17 ಶಾಲೆಗಳ 852 ವಿದ್ಯಾರ್ಥಿಗಳಿಗೆ ಸಾಗ್ರಿಗಳನ್ನು ವಿತರಿಸಲಾಯಿತು. ಸ್ಕೂಲ್ ಬ್ಯಾಗ್, ಪುಸ್ತಕ, ಜಮೆಟ್ರಿ ಬಾಕ್ಸ್, ಪೆನ್, ಪೆನ್ಸಿಲ್, ಸ್ಕೇಲ್, ಚಾಕಲೇಟ್ ಹಾಗೂ ಪ್ರತಿಯೊಂದು ಶಾಲೆಗಳಿಗೆ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ಶಟಲ್ ಬ್ಯಾಟ್, ಕ್ಯಾರಂ ಬೋರ್ಡ್, ಚೆಸ್ ಬೋರ್ಡ್, ಲೂಡೋ ಬೋರ್ಡ್, ರಿಂಗ್, ಸ್ಕಿಪಿಂಗ್, ವಾಲಿಬಾಲ್, ಫುಟ್ಬಾಲ್, ಡಂಬೆಲ್ಸ್ ಹಾಗೂ ಇತರೇ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದ ಕುದುರೆಮುಖ, ಮೇಲ್ ನೆಮ್ಮರ್, ನೆಮ್ಮರ್ ಆಶ್ರಮ ಶಾಲೆ, ಗಂಡಘಟ್ಟ, ಸಿಂದೋಡಿ, ಸಿರಿಮನೆ ಹಾಗೂ ಉಡುಪಿ ಜಿಲ್ಲೆಯ ಸೋಮೇಶ್ವರ, ಕಾಸನಮಕ್ಕಿ, ಸೀತಾನಾದಿ, ನಾಡಪಾಲು, ಮೇಗದ್ದೆ, ಕೊಂಕಣರಾಬೆಟ್ಟು, ಮೆಲ್ಮಟ ಹಾಗೂ ಕುಕ್ಕದೂರು ವಿಜೇತ ವಿಶೇಷ ಮಕ್ಕಳ ಶಾಲೆಗಳಿಗೆ ಸದರಿ ಸಾಮಗ್ರಿಗಳನ್ನು ವಿತರಿಸಲಾಯಿತು.
ನಕ್ಸಲ್ ನಿಗ್ರಹ ಪಡೆಯ ಮಾನ್ಯ ಪೊಲೀಸ್ ಅಧಿಕ್ಷಕ ಶ್ರೀ ಪ್ರಕಾಶ್ ನಿಕಂ IPS ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಜೈನ ಸಂಘ ಹಾಗೂ ಜೈನ ಯುವ ಮಂಡಲದ ಪದಾಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.