



ಕಾರ್ಕಳ; ಕಷ್ಟ-ಸುಖಗಳು ಪ್ರತಿಯೊಬ್ರ ಬದುಕಿನಲ್ಲಿ ಸುಳಿಯದೇ ಇರಲಾರದು. ಪರೋಪಕಾರಿಯಾಗಿ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸ್ಪಂದಿಸುವ ಗುಣ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಕೈಲಾದ ಸೇವೆ ಮಾಡುವುದರಿಂದ ತೃಪ್ತಿ ದೊರಕುವುದು ಎಂದು ಕನಸು ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪವನ್ ಪೆರುಮುಂಡ ಹೇಳಿದರು.
ಕಾರ್ಕಳದಲ್ಲಿ ನೂತನವಾಗಿ ಅಸ್ತಿಿತ್ವಕ್ಕೆ ಬಂದ ಕನಸು ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮೊದಲ ಕಾರ್ಯಕ್ರಮದಂಗವಾಗಿ ಕಾರ್ಕಳದ ಜರಿಗುಡ್ಡೆ ಸುರಕ್ಷಾ ಸೇವಾಶ್ರಮಕ್ಕೆ ಆಹಾರ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಮಾತನಾಡಿ, ಸೇವೆ ಮಾಡುವುದಕ್ಕೆ ಮುಖ್ಯವಾಗಿ ಬೇಕಾಗುವುದು ಮನಸ್ಸು. ಪ್ರತಿಯೊಬ್ಬರು ಕೈಲಾದ ಸಹಾಯ ಮಾಡಿ ಪರರ ನೋವಿಗೆ ಸ್ಪಂದಿಸುವ ಕಾರ್ಯ ನಡೆಸಬೇಕು.. ನಿಸ್ವಾಾರ್ಥ ಸೇವೆ ಮಾಡುವ ಮನೋಭಾವವಿದ್ದರೆ ಯಾವ ರೀತಿಯಲ್ಲೂ ಸೇವೆ ಮಾಡಬಹುದು ಎನ್ನುವುದಕ್ಕೆ ಅನಾಥಶ್ರಮದ ಮೂಲಕ ನೊಂದ ಜೀವಗಳಿಗೆ ಆಸರೆಯಾಗಿರುವ ಅಯಿಶಾರವರೇ ಸಾಕ್ಷಿ ಎಂದು ಹೇಳಿದರು. ಸುರಕ್ಷಾ ಆಶ್ರಮದ ಅಯಿಶಾ ಸ್ವಾಾಗತಿಸಿದರು. ಟ್ರಸ್ಟಿಗಳಾದ ಅರ್ಚನಾ ಶೆಟ್ಟಿ, ದಿನೇಶ್ ಆಚಾರ್ಯ, ಅಕ್ಷತ್, ರಾಮ್ ಅಜೆಕಾರ್ ಉಪಸ್ಥಿತರಿದ್ದರು. ಶ್ವೇತಾ ಜೈನ್, ಮಂಜೇಶ್, ಅವಿಲ್ ಉಪಸ್ಥಿತರಿದ್ದು ಸಹಕರಿಸಿದರು. ಸುಮಾರು 11 ಸಾವಿರಷ್ಟು ಮೊತ್ತದ ಆಹಾರ ಸಾಮಗ್ರಿ, ಹಣ್ಣು ಹಾಗೂ ನಗದು ಹಸ್ತಾಾಂತರಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.