



ಕಾರ್ಕಳ : ಮಾ.9 ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ಲಯನ್ಸ್ ಕ್ಲಬ್ ನ ಗವರ್ನರ್ ಆದ ವಿಶ್ವನಾಥ್ ಶೆಟ್ಟಿ ಇವರು ಅಧಿಕೃತ ಭೇಟಿ ನೀಡಿದರು. ಇವರ ಉಪಸ್ಥಿತಿಯಲ್ಲಿ ರಘುವೀರ್ ಟಿ. ಕೆ ಇವರು ಸರಕಾರಿ ಆಸ್ಪತ್ರೆಗೆ ಗೋಡೆ ಗಡಿಯಾರವನ್ನು ವಿತರಿಸಿದರು. ನಂತರ ಶಿರಡಿ ಸಾಯಿ ಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಆದರ್ಶ ಗಾರ್ಡನ್ ಇದರ ಶಂಕು ಸ್ಥಾಪನೆ ಮಾಡಲಾಯಿತು. ನಂತರ ಹೋಟೆಲ್ ಸುಹಾಗ್ ನಲ್ಲಿ ಸಮಾರಂಭ ಉದ್ಘಾಟಿಸಿ, ಗವರ್ನರ್ ಉಪಸ್ಥಿತಿಯಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಅಧ್ಯಕ್ಷರಾದ ಜ್ಯೋತಿ ರಮೇಶ್ ಈ ವರ್ಷದ ಸೇವಾ ಕಾರ್ಯಕ್ರಮಗಳನ್ನು ಮಾಡಿದರು. ವೇದಿಕೆಯಲ್ಲಿ ಸಪ್ನ ಸುರೇಶ್, ಮಿಥುನ್ ಹೆಗ್ಡೆ, ಸುಭಾಸ್ ಸುವರ್ಣ, ಚಂದ್ರಹಾಸ್ ಸುವರ್ಣ, ಭಂಡಾರಿ, ಅರಣ್ಯಾಧಿಕಾರಿ ಜ್ಯೋತಿ ರಮೇಶ್, ವನಿತಾ ವಿಶ್ವನಾಥ್, ಪ್ರವೀಣ್ ಸುವರ್ಣ ಹಾಗು ಇತರ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭವನ್ನು ನಡೆಸಲಾಯಿತು. ಗಂಗಾಧರ್ ಇವರು ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ರಮೇಶ್ ಇವರು ಸ್ವಾಗತಿಸಿದರು, ಪ್ರವೀಣ್ ಸುವರ್ಣ ಇವರು ಧನ್ಯವಾದ ಇತ್ತರು.ಕಾರ್ಕಳ :
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.