logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಜಿಲ್ಲೆಯ ಸಂಸದ, ಶಾಸಕರೇ ಮೌನ ಮುರಿದು ಉತ್ತರಿಸಿ: ಟೋಲ್ ಮುತ್ತಿಗೆ ಪಾದಯಾತ್ರೆಯಲ್ಲಿ ಎಂ.ಜಿ. ಹೆಗಡೆ ಒತ್ತಾಯ

ಟ್ರೆಂಡಿಂಗ್
share whatsappshare facebookshare telegram
10 Oct 2022
post image

ಮಂಗಳೂರು; ಸುರತ್ಕಲ್ ಅಕ್ರಮ ಟೋಲ್ ವಸೂಲಿ ಕೇಂದ್ರದ ವಿರುದ್ಧ ಕಳೆದ ಹಲವು ವರುಷಗಳಿಂದ ನಿರಂತರ ಹೋರಾಟ ಮೂಲಕ ಜಿಲ್ಲೆಯ ಜನ ಪ್ರಬಲ ವಿರೋಧ ದಾಖಲಿಸುತ್ತಿದ್ದರೂ ಇಲ್ಲಿನ ಸಂಸದರಾಗಲಿ, ಶಾಸಕರುಗಳಾಗಲಿ ಯಾರೂ ಮಾತನಾಡದೆ ಮೌನವಹಿಸುತ್ತಿರುವುದರ ಹಿಂದಿನ ಗುಟ್ಟೇನು? ವ್ಯಾಪಕ ವಿರೋಧ ವ್ಯಕ್ತವಾಗಿರುವ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ಬಗ್ಗೆ ಜನಪ್ರತಿನಿಧಿಗಳು ಮೌನ ಮುರಿದು ಉತ್ತರಿಸಬೇಕೆಂದು ಜನಪರ ಹೋರಾಟಗಾರ ಎಂ.ಜಿ. ಹೆಗಡೆ ಆಗ್ರಹಿಸಿದರು. ಅವರು ಅಕ್ಟೋಬರ್ 18ರಂದು ನಡೆಯುವ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆ, ಮುತ್ತಿಗೆ ಕಾರ್ಯಕ್ರಮದ ಪ್ರಚಾರದ ಭಾಗವಾಗಿ ಇಂದು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಲೇಡಿಗೋಶನ್ ವರೆಗೆ ನಡೆದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ನಿರ್ಣಾಯಕ ಹೋರಾಟದ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ತಯಾರಿಗಳು, ಚರ್ಚೆಗಳು ನಡೆಯುತ್ತಿದ್ದರೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕರುಗಳಾದ ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್ ಯಾರೂ ಈ ಬಗ್ಗೆ ಮಾತನಾಡದೆ ಜನರ ಬೇಡಿಕೆಗೆ ಸ್ಪಂದಿಸದೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಇವರ ಈ ಮೌನವನ್ನು ಮುರಿಯಲು ಅಕ್ಟೋಬರ್ 18ರಂದು ನಡೆಯುವ ಐತಿಹಾಸಿಕ ಹೋರಾಟ ಸಾಕ್ಷಿಯಾಗಬೇಕು. ಅಂದು ನಡೆಯುವ ಟೋಲ್ ಗೇಟ್ ಮುತ್ತಿಗೆ, ನೇರ ಕಾರ್ಯಾಚರಣೆ ದಿನ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ಪಾದಯಾತ್ರೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಸಿಪಿಎಂನ ಸುನೀಲ್ ಕುಮಾರ್ ಬಜಾಲ್, ಕಾರ್ಪೊರೇಟರ್ ಲತೀಫ್‌ ಕಂದುಕ, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿ, ಸಿಪಿಐ ನ ವಿ ಕುಕ್ಯಾನ್, ಸೀತರಾಮ್ ಬೇರಿಂಜೆ, ಕರುಣಾಕರ್, ಜೆಡಿಎಸ್ ನ ಶುಶೀಲ್ ನರೋನ್ಹಾ, ಅಲ್ತಫ್ ತುಂಬೆ, ಸಾಮರಸ್ಯ ಮಂಗಳೂರು ಮಂಜುಳಾ ನಾಯಕ್ , ಸಮರ್ಥ್ ಭಟ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ. ಇಮ್ತಿಯಾಜ್, ನವೀನ್ ಕೊಂಚಾಡಿ, ಆಶಾ ಬೋಳೂರು, ಪ್ರಮಿಳಾ ದೇವಾಡಿಗ, ಭಾರತೀ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಸಿಐಟಿಯು ಮುಖಂಡರುಗಳಾದ ಮುಸ್ತಫ ಕಲ್ಲಕಟ್ಟೆ, ವಿಲ್ಲಿ ವಿಲ್ಸನ್, ಬಸ್ಸು ನೌಕರರ ಸಂಘದ ಅಲ್ತಫ್ ದೇರಳಕಟ್ಟೆ, ಸಾಮಾಜಿಕ ಮುಖಂಡರುಗಳಾದ ಶಾಹುಲ್ ಹಮೀದ್ , ದುರ್ಗಾ ಪ್ರಸಾದ್, ಎಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ ನಿರೂಪಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.