



ಡಿವೈನ್ ಪ್ರೇಯರ್ ಸೆಂಟರ್ ತೊಕ್ಕೊಟ್ಟು (ತೊಕ್ಕೊಟ್ಟು ಬಸ್ಸ್ ಸ್ಟಾö್ಯಂಡ್ ಹಿಂಬದಿ) ಇಲ್ಲಿ ತಪಸ್ಸು ಕಾಲದ ಪ್ರಯುಕ್ತ ‘ಡಿವೈನ್ ವಚನ ಮಹೋತ್ಸವ’ ಇಂದಿನಿಂದ ಮೂರು ದಿನಗಳ ಕಾಲ ಬೆಳಿಗ್ಗೆ ೯ ರಿಂದ ಸಂಜೆ ೬ರ ವರೆಗೆ ಕನ್ನಡದಲ್ಲಿ ರಿಟ್ರೀಟ್ ನಡೆಯಲಿರುವುದು.
ಪೊಟ್ಟಾ ಡಿವೈನ್ ರಿಟ್ರೀಟ್ ಸೆಂಟರಿನ ಪ್ರಖ್ಯಾತ ಬ್ರದರ್ ಸಾಜಿತ್ ಜೋಸೆಫ್ ಮುಖ್ಯ ಪ್ರಭೋಧಕರಾಗಿ ನಡೆಸಿಕೊಡಲಿದ್ದು, ತೊಕ್ಕೊಟ್ಟು ಡಿವೈನ್ ಪ್ರೇಯರ್ ಸೆಂಟರ್ ನಿರ್ದೇಶಕರಾದ ಫಾ| ಜೋಸೆಫ್ ವಾಣಿಯಂತರ, ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಪ್ರಧಾನ ಗುರುಗಳಾದ ಫಾ| ಸಿಪ್ರಿಯನ್ ಪಿಂಟೊ ಮತ್ತು ತೊಕ್ಕೊಟ್ಟು ಡಿವೈನ್ ಪ್ರೇಯರ್ ಸೆಂಟರ್ ಸಹಾಯಕ ಗುರುಗಳಾದ ಫಾ| ಜೋಲಿ ತಡತ್ತಿಲ್ ಬೈಬಲ್ ಪ್ರತಿಷ್ಟಾಕರು ಪ್ರವಚನ ನೀಡಲಿದ್ದು, ಡಿವೈನ್ ತಂಡದಿಂದ ಸ್ತುತಿ ಆರಾಧನೆ, ಪ್ರವಚನ, ಬಲಿಪೂಜೆ ಹಾಗೂ ರೋಗ ಸೌಖ್ಯಕ್ಕಾಗಿ ವಿಶೇಷ ಪ್ರಾರ್ಥನೆ ಇರಲಿದೆ. ಫಾ| ಜೋಸೆಫ್ ವಾಣಿಯಂತರ ಇವರು ಸರ್ವರಿಗೂ ಇದರಿಂದ ಸ್ವಾಗತ ಬಯಸಿದ್ದು, ಎಲ್ಲರೂ ಆಗಮಿಸಿ, ತಪಸ್ಸು ಕಾಲದಲ್ಲಿ ದೇವರ ಕೃಪೆಯನ್ನು ಪಡೆಯಲು ಕೋರಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.