



ಕಾರ್ಕಳ : ‘ಮಾನವನಲ್ಲಿ ದೈವತ್ವ ಸದಾ ಜಾಗೃತ ಸ್ಥಿತಿಯಲ್ಲಿರುತ್ತದೆ ಎಂದು ಶ್ರೀ ಬೈಲೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿ ಪ್ರಬೋಧಾನಂದಜಿ ಮಹಾರಾಜ್ ಹೇಳಿದರು ಶ್ರೀ ಭುವನೇಂದ್ರ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ರಾಷ್ಟಿçÃಯ ಸೇವಾ ಯೋಜನ ಘಟಕ ಇವುಗಳÀ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟಿçÃಯ ಯುವ ಸಪ್ತಾಹ -೨೦೨೨ರ ಪ್ರಯುಕ್ತ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ ಕೆಲವೊಂದು ಬೇಲಿಗಳನ್ನು ಹಾಕಿಕೊಂಡಿರುವುದರಿAದ ಆ ಚಿಂತನೆಗಳು ಮರೆಯಾಗಿರುತ್ತವೆ. ಪ್ರತಿಯೊಬ್ಬನಲ್ಲೂ ಪ್ರಚೋದನೆ ಮತ್ತು ಚಾಲನೆ ಎಂಬ ಶಕ್ತಿ ಇರುವುದರಿಂದ, ಕೆಳಮಟ್ಟದ ಆಸೆಗಳಲ್ಲಿ ಬೇಕಾದುದನ್ನು ಇಟ್ಟುಕೊಂಡು ಉಳಿದವನ್ನು ನಾವೇ ನಾಶಮಾಡಿಕೊಳ್ಳಬೇಕು. ಆಸೆಗಳನ್ನು ಮೀರಿ ಇರುವ ಇನ್ನೊಂದು ಆಸೆಯೇ ಆಧ್ಯಾತ್ಮಿಕ ಪ್ರಚೋದನೆ. ಅದನ್ನು ಪಡೆಯುವಲ್ಲಿ ಹಾತೊರೆದರೆ ಬದುಕಿನಲ್ಲಿ ನಮ್ಮ ಭಾವನಾತ್ಮಕ ಸಂಕಷ್ಟಗಳು ಸಂಪೂರ್ಣ ದೂರವಾಗುತ್ತವೆ. ಅದನ್ನು ಪಡೆಯುವಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕು ಎಂದರು. ಸ್ವಾಮೀ ವಿವೇಕಾನಂದರ ಕುರಿತು ಡಾ. ರಾಘವೇಂದ್ರ ರಾವ್ ಅವರು ಮಾತನಾಡಿ – ‘ ನಮ್ಮಲ್ಲಿ ಏಕಾಗ್ರತೆ ಮತ್ತು ನಿರಂತರತೆಯ ಕೊರತೆಯಿದ್ದು , ಅದನ್ನು ಗಳಿಸುವಲ್ಲಿ ವಿವೇಕ ಮತ್ತು ಚೈತನ್ಯ ನಮ್ಮಲ್ಲೇ ಇದೆ ಎಂಬುದರ ಅರಿವು ಬಂದರೆ ಮಾತ್ರ ಸಾಧ್ಯ. ಅಪರಿಮಿತ ಪರಿಶ್ರಮದಿಂದ ಇದು ಸಾಧ್ಯ ಎಂಬುದಾಗಿ ವಿವೇಕಾನಂದರ ದೃಷ್ಟಾಂತದೊAದಿಗೆ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್. ಎ. ಕೋಟ್ಯಾನ್ ಅವರು ವಹಿಸಿದ್ದರು. ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಹಾಗೂ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಪ್ರೊ. ಸುಚಿತ್ರಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಭಟ್ಟ ಅವರು ಸ್ವಾಗತ ಮತ್ತು ಪ್ರಸ್ತಾವನೆಯ ಮಾತುಗಳನ್ನಾಡಿದರು. ಕು.ದೀಪ್ತಿ ವಂದಿಸಿದರು. ಕು. ವಿನುತಾ ಭಟ್ ಮತ್ತು ತಂಡದವರು ಪ್ರಾರ್ಥಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.