



!
ಉಡುಪಿ : ತಾಲೂಕಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಉಡುಪಿಯ ರಥಬೀದಿ ಸಹಿತ ನಗರದ ವಿವಿಧೆಡೆ ಹಬ್ಬದ ಖರೀದಿ ಜೋರಾಗಿತ್ತು. ತುಳುನಾಡಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಸಾಂಪ್ರದಾಯಿಕ ಆಚರಣೆಗಳು ನಡೆಯಲಿದ್ದು, ಮನೆ, ಅಂಗಡಿ, ಹೀಗೆ ಎಲ್ಲೆಡೆಯೂ ಹಲವು ರೀತಿಯಲ್ಲಿ ಅಲಂಕಾರ ಮಾಡಿ ಸಂಭ್ರಮಿಸಲಾಗುತ್ತದೆ. ದೀಪಾವಳಿ ಹಿನ್ನೆಲೆಯಲ್ಲಿ ಫಲ ಪುಷ್ಪ, ಹಣ್ಣು ತರಕಾರಿಗಳಿಗೂ ಬೇಡಿಕೆ ಹೆಚ್ಚಾಗಿದ್ದು, ಜನತೆ ಹಬ್ಬದ ವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದಾರೆ. ಪಟಾಕಿ ಅಂಗಡಿಗಳಲ್ಲಿಯೂ ಖರೀದಿ ಭರಾಟೆ ಜೋರಾಗಿತ್ತು. ರಥಬೀದಿಯಲ್ಲಿ ಹಬ್ಬದ ಖರೀದಿ ಜನರು ಮುಗಿಬಿದ್ದಿದ್ದು, ಉಣತೆ, ದೀಪ, ಹೂವು, ತರಕಾರಿ ಹಾಗೂ ತುಳಸಿ ಪೂಜೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ರಥಬೀದಿಯಲ್ಲಿ ಜನರ ಸಂಚಾರ ಹೆಚ್ಚಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.