



ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿಯ ಹಳೆವಿದ್ಯಾರ್ಥಿ ದೀಕ್ಷಿತ್ ನಾಯಕ್ ಉಡುಪಿ ಜಿಲ್ಲೆಯ ವಾಲಿಬಾಲ್ ತಂಡದಲ್ಲಿ ಭಾಗವಹಿಸಿ, ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ರಾಜ್ಯಕ್ಕೆ ಆತ್ಯುತ್ತಮ ಆಟಗಾರನೆಂಬ ಹೆಸರು ಪಡೆದ ದೀಕ್ಷಿತ್ ಈಗ ಕರ್ನಾಟಕ ರಾಜ್ಯದ ಪರವಾಗಿ ರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಅತ್ರಾಡಿ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ದಿನೇಶ್ ನಾಯಕ್ ಕಬ್ಯಾಡಿ ಇವರ ಪುತ್ರ ನಾಗಿರುವ ದೀಕ್ಷಿತ್ ನಾಯಕ್ ಪ್ರಸ್ತುತ ಹಿರಿಯಡ್ಕ ಕೆಪಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಮುಂದಿನ ಕ್ರೀಡಾ ಮತ್ತು ವಿದ್ಯಾರ್ಥಿ ಜೀವನವು ಉಜ್ವಲವಾಗಲಿ ಎಂದು ಅತ್ರಾಡಿ ಶಾಲಾ ಮಂಡಳಿ ಶುಭಹಾರೈಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.