



ಹುಬ್ಬಳ್ಳಿ: ಬಡತನವನ್ನು ದುರುಪಯೋಗ
ಮಾಡಿಕೊಂಡು ಮತಾಂತರ ಮಾಡುವುದು ತಪ್ಪು.
ಹಾಗಾಗಿ ಆಸೆ ಆಮಿಷೆಯೊಡ್ಡಿ ಮತಾಂತರ ಆಗುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ತನ್ನ ನಿವಾಸದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಹಿಂದೂ, ಮುಸ್ಲಿಂ,
ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು
ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ
ಯಾವುದೇ ಆತಂಕ ಬೇಡ. ಈಗಾಗಲೇ ಕ್ರಿಶ್ಚಿಯನ್
ಸಮುದಾಯದ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಮತಾಂತರ ನಿಷೇಧ ಕಾಯಿದೆ ಚರ್ಚೆಗೆ ಮುನ್ನ
ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿಯು
ಕಾನೂನು ಇಲಾಖೆಯ ಸಮಿತಿ ಜತೆ
ಮತಾಂತರದ ವಿಷಯವಾಗಿ ಸಂಪೂರ್ಣ ಪರಿಶೀಲನೆ ಮಾಡಲಿದೆ. ಸಮಿತಿ ನೀಡುವ ವರದಿ ಸಂಪುಟ ಸಭೆ ಮುಂದೆ ಬರುತ್ತದೆ.
ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ನಂತರ ವಿಧಾನಸಭೆಗೆ ಬಂದರೆ
ಬೆಳಗಾವಿಯಲ್ಲಿಯೇ ಮತಾಂತರ ಕಾಯಿದೆ ಕುರಿತು
ಚರ್ಚೆ ಮಾಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಹ್ಯಾಕ್
ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ
ಬೊಮ್ಮಾಯಿ, ಈಗಾಗಲೇ ಪ್ರಧಾನಿಗಳು ಟ್ವಿಟರ್ ಹ್ಯಾಕ್ ಕುರಿತು ಮಾತನಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರನ್ನು ಗುರುತಿಸಲು ಕಾರ್ಯಾಚರಣೆ ಕೂಡ ಮಾಡಲಾಗುತ್ತಿದೆ. ಅದಲ್ಲದೇ ಇಂತಹ ಹ್ಯಾಕ್ ಆಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುವುದು ಎಂದು ಅವರು ನುಡಿದರು.
ರಾಜ್ಯದಲ್ಲಿ ಒಮೈಕ್ರಾನ್ ಟೆಸ್ಟಿಂಗ್ ಲ್ಯಾಬ್‌ಗಳನ್ನು
ಹೆಚ್ಚಿಸಲಾಗುವುದು, ಈಗಾಗಲೇ ಒಂದು ಜಿನೋಮಿಕ್ ಸ್ವಿಕ್ವೇನ್ಸ್ ಲ್ಯಾಬ್ ನ್ನು ಹೆಚ್ಚಿಗೆ ಮಾಡುತ್ತೇವೆ ಎಂದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.