



ವಾಟ್ಸಪ್ ವಿಶೇಷ ತೆಯ ಹೊಸ ಹೊಸ ಪ್ರಯೋಗಗಳನ್ನು ರೂಪಿಸುತಿದ್ದು ಈಗ ಹೊಸ ಅಧಿಕಾರ ವನ್ನು ಅಡ್ಮಿನ್ ಗೆ ನೀಡಿದೆ . ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿನ ಯಾವುದೇ ಸದಸ್ಯರು ಹಾಕಿದ ಮೆಸೇಜ್ ಅಥವಾ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಲು ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಅನುಮತಿ ನೀಡಿದೆ. ಸದ್ಯ ಬೀಟಾ ವರ್ಶನ್‌ನಲ್ಲಿ ವ್ಯಾಟ್ಸ್ಆ್ಯಪ್ ಈ ಫೀಚರ್ಸ್ ನೀಡಿದೆ. ಶೀಘ್ರದಲ್ಲೇ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಈ ಫೀಚರ್ಸ್ ಲಭ್ಯವಾಗಲಿದೆ. ಈ ಫೀಚರ್ಸ್ ಆಡ್ಮಿನ್ ಗ್ರೂಪ್‌ನಲ್ಲಿ ಸದಸ್ಯರು ಹಾಕಿದ ಯಾವುದೇ ಮೆಸೇಜ್ ಒತ್ತಿ ಹಿಡಿದಾಗ ಡಿಲೀಟ್ ಆಯ್ಕೆ ಬರಲಿದೆ. ಇಲ್ಲಿ ಸಾಮಾನ್ಯವಾಗಿ ಇರುವ ಡಿಲೀಟ್ ಫಾರ್ ಆಲ್ ಮಾಡಿದರೆ ಸದಸ್ಯರ ಮೆಸೇಜ್ ಗ್ರೂಪ್‌ನಿಂದ ಡಿಲೀಟ್ ಆಗಲಿದೆ. ಇಲ್ಲೀವರೆಗೆ ಯಾರು ಮಸೇಜ್ ಪೋಸ್ಟ್ ಮಾಡುತ್ತಾರೆ ಅವರಿಗೆ ಮಾತ್ರ ಡಿಲೀಟ್ ಮಾಡುವ ಅಧಿಕಾರವಿತ್ತು. ಇನ್ಮುಂದೆ ಗ್ರೂಪ್ ಸದಸ್ಯರ ಮೆಸೇಜ್ ಡಿಲೀಟ್ ಮಾಡುವ ಅನುಮತಿ ಅಡ್ಮಿನ್‌ಗೂ ಇರಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.