



ಕಾರ್ಕಳ : ಕಾರ್ಕಳ ಅರಣ್ಯ ಇಲಾಖೆ ವ್ಯಾಪ್ತಿಯು ಸಾಣೂರಿನಿಂದ ವರಂಗ ದ ಗಡಿ ಭಾಗದ ವರೆಗೆ ಪ್ರದೇಶವು ವಿಸ್ತರಿಸಿದೆ..ಕಾಡುಗಳು,ಮರ -ಗಿಡ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಅದರ ನಿರ್ವಹಣೆಯನ್ನು ಅರಣ್ಯ ಇಲಾಖೆಗಳು ಮಾಡುತ್ತವೆ.ಪ್ರಸ್ತುತ ಹಾಗೂ ಭವಿಷ್ಯ ವನ್ನು ಮುಂದಿಟ್ಟುಕೊಂಡು ಅರಣ್ಯಗಳ ಸಂರಕ್ಷಣೆ,ನಿರ್ವಹಣೆ,ಅಭಿವೃದ್ಧಿ ಜೊತೆ ಜೊತೆಗೆ ಮರಗಳನ್ನು ಉಳಿಸಿ ಬೆಳೆಸಿ ಅದರ ಪೋಷಣೆ ಯನ್ನು ಮಾಡುವುದು ಅದರ ಜೊತೆಗೆ ಪಾಳು ಭೂಮಿಯನ್ನು ಹಸಿರು ಗೊಳಿಸಿ ತಮ್ಮ ತಮ್ಮ ಜಮೀನು ಜಾಗ ಗಳಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅರಣ್ಯಗಳ ಕುರಿತು ಅದರ ನಿರ್ವಹಣೆಯನ್ನು ಮಾಡುವುದರ ಮೂಲಕ ಪರಿಸರದ ಭದ್ರತೆ ಹಾಗೂ ಅದರ ಸಮತೋಲನ ಕೈಗೊಳ್ಳಲು ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆಯು ಯೋಜನೆಗಳನ್ನು ಮಾಡಿ ಅದನ್ನು ಜಾರಿಗೆ ತರುತ್ತದೆ.
ಅರಣ್ಯ ಇಲಾಖೆ ಯಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ:
ಅರಣ್ಯಗಳು ಅಲ್ಲಿನ ಜೀವವೈವಿಧ್ಯಗಳು ಮತ್ತು ವನ್ಯಜೀವಿ ಹಾಗೂ ಅವುಗಳ ವಾಸ ಸ್ಥಳದ ಸುಧಾರಣೆಯನ್ನು ಮಾಡುವುದು, ಗಿಡ ನೆಡುವುದು ಜಾಗೃತಿಯನ್ನು ಮೂಡಿಸುವುದು ಹೀಗೆ ಹಲವಾರು ಯೋಜನೆಗಳ ಮೂಲಕ ಅರಣ್ಯ ಇಲಾಖೆಗಳು ಸಾರ್ವಜನಿಕರಿಗೆ ಸೌಲಭ್ಯ ನೀಡುತ್ತದೆ.
ಎ ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸಿ ಅವುಗಳನ್ನು ಅವರು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ
ಬಿ ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು ಈ ಯೋಜನೆಯಲ್ಲಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರರಿಗೆ ರಿಯಾಯಿತಿ ದರದಲ್ಲಿ ವಿತರಣೆಯನ್ನು ಮಾಡಲಾಗುತ್ತದೆ.
ಸಿ) ಮಗುವಿಗೊಂದು ಮರ ಶಾಲೆಗೊಂದು ವನ ಶಾಲಾ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸಿ ಶಾಲಾ ಆವರಣ ಹಾಗೂ ಮನೆ ಆವರಣದಲ್ಲಿ ಗಿಡ ನೆಡುವುದು ಹಾಗೂ ಶಾಲಾ ಮಕ್ಕಳಿಗೆ ಉಚಿತ ಸಸ್ಯಗಳನ್ನು ನೀಡುತ್ತದೆ.
ಡಿ ) ಚಿನ್ನರ ವನ್ಯ ದರ್ಶನ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.8-10ನೇ ತರಗತಿಯ 50 ವಿದ್ಯಾರ್ಥಿಗಳಿಗೆ ಈ ಅರಣ್ಯ ದರ್ಶನ ವನ್ನು ಸರ್ಕಾರದ ವೆಚ್ಚದಲ್ಲಿ ಎರಡು ದಿವಸಗಳ ಕಾಲ ಮಾಡಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಮಾಹಿತಿ ಯನ್ನು ಇಲಾಖೆ ಯು ನೀಡುತ್ತದೆ.
ಇ ) ವೃಕ್ಷೋದ್ಯಾನ ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಮತ್ತು ಅರಣ್ಯೆತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರ ಸಮುದಾಯಕ್ಕೆ ಸೇರಿದ ಪ್ರದೇಶಗಳು ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರದ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುತ್ತದೆ.
ಇದಿಷ್ಟು ಮಾತ್ರವಲ್ಲದೆ ಕಾಡು ಪ್ರಾಣಿಗಳು ಅಂದರೆ ಕಾಡುಕೋಣ ಕಾಡು ಹಂದಿಗಳು ಹೀಗೆ ಹಲವಾರು ಕಾಡು ಪ್ರಾಣಿಗಳು ಕೃಷಿಗಳನ್ನು ಅಂದರೆ ಬೆಳೆಗಳು, ಅಡಿಕೆ,ಭತ್ತ ಹೀಗೆ ಇವುಗಳ್ಳನ್ನೆಲ್ಲ ನಾಶ ಮಾಡಿದರೆ ಅದರ ಪರಿಹಾರ ರೂಪವಾಗಿ ಹಣವನ್ನು ಇಂತಿಷ್ಟು ಎಂದು ನೀಡಲಾಗುತ್ತದೆ. ಮತ್ತು ಮನುಷ್ಯನಿಗೆ ಕಾಡು ಪ್ರಾಣಿಗಳಿಂದ ಯಾವುದೇ ರೀತಿಯ ತೊಂದರೆ ಆದಲ್ಲಿ ಅಥವಾ ಮನುಷ್ಯನು ಕಾಡು ಪ್ರಾಣಿ ಇಂದ ಸಾವಿಗೀಡದಲ್ಲಿ ಆತನ ಮನೆಗೆ 15ಲಕ್ಷ ನೀಡುತ್ತಾರೆ. ಹಾಗೂ 4 ಸಾವಿರ ರೂ ಗಳನ್ನು ತಿಂಗಳು ತಿಂಗಳು ಪೆಂಷನ್ ರೂಪದಲ್ಲಿ ನೀಡಲಾಗತ್ತದೆ. ಅರಣ್ಯದಂಚಿನಲ್ಲಿರುವ ಬುಡಕಟ್ಟು ಜನಾಂಗ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರಿಗೆ ಗ್ಯಾಸ್ ಸಿಲಿಂಡರ್ ಅನ್ನು ಒದಗಿಸಲಾಗಿದ್ದು ಈವಾಗ ಅದರ ರಿಫೀಲಿಂಗ್ ಚಾರ್ಜ್ ಅಂತ ವರ್ಷಕ್ಕೆ 2000ರೂಪಾಯಿಗಳನ್ನು ಪಂಚಾಯಿತಿಯ ಆಯ್ಕೆಯ ಮೂಲಕ ನೀಡಲಾಗುತ್ತದೆ. ಹೀಗೆ ಹಲವಾರು ಯೋಜನೆಗಳನ್ನು ಸೇವೆಗಳನ್ನು ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ನೀಡುತ್ತದೆ.ಕಾಡನ್ನು ಸಂರಕ್ಷಿಸೋಣ ಬನ್ನಿ
ದಿವ್ಯಾ ತೃತೀಯ ಬಿ ಎ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.