



ಕಾರ್ಕಳ: ಕಾರ್ಕಳದ ಆರ್.ಗೌತಮ್ ಶೆಣೈರವರು ಚೆನ್ನೈನ ಪ್ರತಿಷ್ಠಿತ ಗಣಿತಶಾಸ್ತ್ರ ಸಂಶೋಧನಾ ಕೇಂದ್ರದ ಡೈರೆಕ್ಟರ್ ಡಾ.ಮಾಧವನ್ ಮುಕುಂದ್ ಮತ್ತು ಪ್ರೊ.ಎಸ್.ಪಿ. ಸುರೇಶ್‌ರವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ‘ಆನ್ ಎಫೆಕ್ಟಿವ್ ವೆರಿಫಿಕೇಶನ್ ಆಫ್ ರೆಪ್ಲಿಕೇಟೆಡ್ ಡೇಟಾ ಟೈಪ್ಸ್ʼ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇದೇ ಕೇಂದ್ರದಿಂದ 2012ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಎಸ್ಸಿ. ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾರೆ. ಕಾರ್ಕಳದ ಖ್ಯಾತ ವೈದ್ಯರಾದ ಡಾ.ಆರ್.ಗಿರೀಶ್ ಶೈಣೈ ಹಾಗೂ ಆರ್.ನಿರ್ಮಲಾ ಶೆಣೈ ದಂಪತಿಗಳ ಸುಪುತ್ರರಾಗಿದ್ದು, ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪಿ.ಯು. ಶಿಕ್ಷಣವನ್ನು ನಿಟ್ಟೆಯ ಎನ್.ಎಸ್.ಎ.ಎಮ್. ಕಾಲೇಜಿನಲ್ಲಿ ಪೂರೈಸಿ 2002ರಲ್ಲಿ ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ 27ನೇ ರ್ಯಾಂಕ್ ಗಳಿಸಿದುದನ್ನು ಸ್ಮರಿಸಿಕೊಳ್ಳಬಹುದು. ಇವರು ಎನ್.ಐ.ಟಿ.ಕೆ ಸುರತ್ಕಲ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ ಪದವಿಯನ್ನು ಗಳಿಸಿ, ಐಬಿಎಂ ಸಂಸ್ಥೆಯ ಉದ್ಯೋಗಿಯಾಗಿ ಕಾಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.