logo
WhatsApp Image 2026-04-02 at 14.46.04.jpeg
hindalco everlast.jpeg

ಸಾಕ್ಷ್ಯ ಚಿತ್ರ "ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್" ಬಿಡುಗಡೆ: ಸಂಶೋಧನೆ ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಬೇಕು: ಪ್ರೊ. ವರದೇಶ್ ಹಿರೇಗಂಗೆ

ಟ್ರೆಂಡಿಂಗ್
share whatsappshare facebookshare telegram
2 Oct 2023
post image

ಬೆಳ್ತಂಗಡಿ: ಸಂಶೋಧನೆ ಮಾನಸಿಕ ಬದಲಾವಣೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಬೇಕು ಎಂದು ಮಾಹೆಯ ಗಾಂಧಿಯನ್ ಇನ್ಸ್ಟಿಟ್ಯೂಟ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ ಸಂಸ್ಥೆ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಹೇಳಿದರು.

ಉಜಿರೆ ಎಸ್ ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿನಿ ಪೂರ್ಣಿಮಾ ರವಿ ನಿರ್ದೇಶನದ ದೇವದಾಸಿಯರ ಬಗ್ಗೆ ಭಾನುವಾರ ಸಾಕ್ಷ್ಯ ಚಿತ್ರ "ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್" ಬಿಡುಗಡೆಗೊಳಿಸಿ ಮಾತನಾಡಿದರು.

ಸಾಮಾನ್ಯವಾಗಿ ಡಾಕ್ಟರೇಟ್ ಪದವಿಗಾಗಿ, ಜ್ಞಾನ ವೃದ್ಧಿಗಾಗಿ ಸಂಶೋಧನೆ ಮಾಡುತ್ತಾರೆ. ಬಳಿಕ ಆ ಮಹಾಪ್ರಬಂಧಗಳು ಕಪಾಟುಗಳಲ್ಲಿ ಸುರಕ್ಷಿತವಾಗಿರುತ್ತವೆ. ಆದರೆ ಪೂರ್ಣಿಮಾ ರವಿ ಉಪೇಕ್ಷಿತ ಜನಾಂಗವಾದ ದೇವದಾಸಿಯರ ಬದುಕಿನ ಬವಣೆ, ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸಮಗ್ರ ಮಾಹಿತಿ ಕಲೆಹಾಕಿ ಸಂಶೋಧನೆಯಿಂದ ಅವರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಆಗಬೇಕು. ಸಮಾಜದಲ್ಲಿಯೂ ಅವರ ಬಗ್ಗೆ ಸದಭಿಪ್ರಾಯ ಮೂಡಬೇಕು ಎಂಬ ಉದ್ದೇಶದಿಂದ ಸಾಕ್ಷ್ಯ ಚಿತ್ರ ತಯಾರಿಸಿದ್ದಾರೆ ಎಂದರು. ಪೂರ್ಣಿಮಾ ರವಿ ಮತ್ತು ಬಳಗದವರನ್ನು ಅಭಿನಂದಿಸಲಾಯಿತು.

ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಶಾಸ್ತ್ರಿ, ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷರಾದ ವಿ. ರೇಣುಕಮ್ಮ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಚ ಸ್ವಾಗತಿಸಿ, ಪೂರ್ಣಿಮಾ ರವಿ ವಂದಿಸಿ, ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲ ಮಾಹೆಯ ಗಾಂಧಿಯನ್ ಇನ್ಸ್ಟಿಟ್ಯೂಟ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ ಸಂಸ್ಥೆ ನಿರ್ದೇಶಕ ಪ್ರೊ ವರದೇಶ್ ಹಿರೇಗಂಗೆ ಕಾರ್ಯಕ್ರಮ ಉದ್ಘಾಟಿಸಿದರು. ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಶಾಸ್ತ್ರಿ, ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ವಿ. ರೇಣುಕಮ್ಮ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.