



ಹೆಬ್ರಿ : ಗ್ರಾಮೀಣ ಪ್ರದೇಶದ ೫೦ ಮಕ್ಕಳಿಗೆ ರಂಗಕಲೆಯ ಪರಿಚಯ ಮಾಡಿಸುವ ರಂಗ ನಿರ್ದೇಶಕ ಸುಕುಮಾರ್ ಮೋಹನ್ ಪ್ರಯತ್ನ ಅತ್ಯಂತ ಅದ್ಬುತ ಕೆಲಸ. ಸಂಕಷ್ಟದ ಈ ಕಾಲದಲ್ಲೂ ಉಚಿತವಾಗಿ ತರಭೇತಿ ನೀಡಿರುವುದು ಶ್ಲಾಘನೀಯ. ಕಲೆಯ ತರಭೇತಿಗಳು ವ್ಯಾಪಾರ ಆಗಬಾರದು. ಸುಕುಮಾರ್ ಮೋಹನ್ ರಂಗಭೂಮಿಯ ಹೆಮ್ಮೆ ಎಂದು ನಾಟಕ ಕಲಾವಿದರಾದ ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ಧನ್ ಹೇಳಿದರು.
ಅವರು ಮುದ್ರಾಡಿ ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಾಟ್ಕದೂರು ಆರೂರು ಕೃಷ್ಣಮೂರ್ತಿ ರಾವ್‌ರಂಗ ಮಂದಿರದಲ್ಲಿ ೮ ದಿನಗಳ ಕಾಲ ನಡೆದ ಪ್ರಥಮ ವರ್ಷದ ಬೇಸಿಗೆ ಶಿಬಿರ - ಹಳ್ಳಿ ಮಕ್ಕಳ ಪ್ರತಿಭಾ ವೇದಿಕೆ -ಮಕ್ಕಳ ರಂಗ ಯಾನ - ೨೦೨೨ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.
ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಸೀತಾನದಿ ವಿಠ್ಠಲ ಶೆಟ್ಟಿ ಮಾತನಾಡಿ ರಂಗ ನಿರ್ದೇಶಕ ಸುಕುಮಾರ್ ಮೋಹನ್ ಬದ್ಧತೆಯಿಂದ ರಂಗಸೇವೆ ಮಾಡಿದ್ದರಿಂದ ಎಲ್ಲವನ್ನೂ ಮೀರಿ ಎತ್ತರಕ್ಕೆ ಏರಿದ್ದಾರೆ. ರಂಗಕಲೆಯ ಶಿಬಿರ ಮಕ್ಕಳಿಗೆ ಪ್ರೇರಣೆ ನೀಡುತ್ತದೆ. ಬದುಕುವ ಶಿಕ್ಷಣ ದೊಒರೆತಾಗ ಮಾತ್ರ ಬದುಕಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ರಂಗ ನಿರ್ದೇಶಕರಾದ ಚಂದ್ರನಾಥ ಬಜಗೋಳಿ ಅವರ ಮುಖ್ಯ ನಿರ್ದೇಶನದಲ್ಲಿ ೮ ದಿನಗಳ ಮಕ್ಕಳ ರಂಗ ಯಾನ ಬೇಸಿಗೆ ಶಿಬಿರ ನಡೆಯಿತು. ಯುವ ಪ್ರತಿಭೆ ನಾಟ್ಕದೂರಿನ ಶ್ವೇತಾ ನೆಲ್ಲಿಕಟ್ಟೆ ಸಹ ನಿರ್ದೇಶನ ನೀಡಿದರು. ಗ್ರಾಮೀಣ ಪ್ರದೇಶದ ೫೦ ಮಕ್ಕಳು ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಪಲ್ಲವಿ ರಾವ್, ವಕೀಲ ಸುರೇಶ ಪೂಜಾರಿ, ಕಲಾ ಪೋಷಕ ಸತ್ಯಾಶ್ರಯ ಕಲ್ಕೂರ್, ನವೀನ್‌ಕೋಟ್ಯಾನ್ , ಹಿರಿಯ ರಂಗ ನಿರ್ದೇಶಕರಾದ ಮುದ್ರಾಡಿ ನಮ ತುಳುವೆರ್‌ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ್, ವಾಣಿ ಸುಕುಮಾರ್, ಸುಗಂಧಿ ಉಮೇಶ್‌ಕಲ್ಮಾಡಿ, ಸುರೇಂದ್ರ ಮೋಹನ್, ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ,ದಿವ್ಯಾ ಶೆಟ್ಟಿ ಸಹಿತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.