logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಡಾ. ಜೆರಿ ನಿಡ್ಡೊಡಿಯವರಿಗೆ ಕೊಂಕಣಿ ಲೇಖಕ್ ಸಂಘ್‌ನ ಪ್ರಶಸ್ತಿ ಪ್ರದಾನ

ಟ್ರೆಂಡಿಂಗ್
share whatsappshare facebookshare telegram
19 Feb 2024
post image

ಮಂಗಳೂರು: ಪ್ರತಿಯೊಂದು ಸಮುದಾಯಕ್ಕೆ ಅವರದ್ದೆ ಆದ ಸಂಸ್ಕೃತಿ ಇರುವಂತೆ ನಮಗೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಹರಿದು ಬಂದಿದ್ದು ಪರಿವರ್ತನಾಶೀಲಾ ವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ-ನಾಡು-ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ ಅಭಿನ್ನವಾಗಿ ಉಳಿಯುವುದು ನಮ್ಮ ಜವಾಬ್ದಾರಿಯಾಗಿದೆ. ಸಾಹಿತಿಗಳು ಇದಕ್ಕೆ ಮಹತ್ತರ ಕೊಡುಗೆ ನೀಡುತ್ತಾರೆ. ತಮ್ಮ ಲೇಖನಿಯಿಂದ ಕೊಂಕಣಿ ಲೇಖಕ ಸಮುದಾಯದಲ್ಲಿ ತಮ್ಮದೇ ಛಾಪನ್ನು ಒತ್ತಿದ ಡಾ. ಜೆರಾಲ್ಡ್ ಪಿಂಟೊರವರಿಗೆ ಅಭಿನಂದನೆಗಳು ಎಂದು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯ ರೆಕ್ಟಾರ್ ರೆ. ಡಾ. ರೊನಾಲ್ಡ್ ಸೆರಾವೊ ತಮ್ಮ ಸಂದೇಶ ನೀಡಿದರು.

ಸಂದೇಶ ಪ್ರತಿಷ್ಠಾನ, ಮಂಗಳೂರು ಇದರ ಸಭಾಭವನದಲ್ಲಿ ಡಾ. ಜೆರಿ ನಿಡ್ಡೊಡಿಯವರು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಇವರ 2024 ನೇ ವರ್ಷದ ಪ್ರಶಸ್ತಿಯನ್ನು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯ ರೆಕ್ಟಾರ್ ರೆ. ಡಾ. ರೊನಾಲ್ಡ್ ಸೆರಾವೊ, ಆಳ್ವಾಸ್ ಕಾಲೇಜಿನ ಕನ್ನಡ ಪ್ರೊಫೆಸರ್ ಟಿ.ಎ.ಎನ್ ಖಂಢಿಗೆ, ಕೊಂಕಣಿ ಲೇಖಕ ಸಂಘ್ ಇದರ ಸಂಚಾಲಕ ರಿಚಾರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡಾ. ಎಡ್ವರ್ಡ್ ನಜ್ರೆತ್, ಡೊಲ್ಫಿ ಕಾಸ್ಸಿಯಾ, ಹೆನ್ರಿ ಮಸ್ಕರೇನಸ್, ಅವರ ಉಪಸ್ಥಿತಿಯಲ್ಲಿ ಪೇಟವನ್ನಿಟ್ಟು ಶಾಲು ಹೊದೆಸಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಸನ್ಮಾನಪತ್ರ ಹಾಗೂ ರು. 25,000 ಗಳನ್ನು ಒಳಗೊಂಡಿದೆ.

ಈ ಕಾರ್ಯಕ್ರಮದ ಗೌರವ ಅತಿಥಿ ಯಾದ ಪ್ರೊ. ಟಿ.ಎ.ಎನ್ ಖಂಡಿಗೆಯವರು ಕುಟುಂಬದಂತೆ ಇರುವ ಲೇಖಕ ಸಂಘದಲ್ಲಿ ತಮ್ಮದೇ ಮನೆಯವ ಸದಸ್ಯರ ಸಾಧನೆ ಗುರುತಿಸಿ ಅವರನ್ನು ಅಭಿನಂದಿಸುವುದಯ ಸ್ತುತ್ಯಾರ್ಹ. ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಡಬೇಕು. ಕರಾವಳಿ ಒಂದು ಬಹು ಭಾಷಾ ಸಂಗಮ. ಇಂತಹ ಬಹುತ್ವದ ಸಾಮರಸ್ಯದಲ್ಲಿ ಕೊಂಕಣಿ ಭಾಷಿಕರ ಹಾಗೂ ಸಮುದಾಯದ ಕೊಡುಗೆ ಅಪಾರ. ಕೊಂಕಣಿ ಭಾಷೆಯಲ್ಲಿ ಬಂದಿರುವ ಸಾಹಿತ್ಯಾವೂ ಅಪಾರ. ಈ ಸಾಹಿತ್ಯವು ಈ ಪ್ರದೇಶದ ಬೆಳವಣಿಗೆಗೆ ಹಾಗೂ ಪ್ರಗತಿಗೆ ಅನೇಕರೀತಿಯಲ್ಲಿ ಕೊಡುಗೆ ನೀಡಿದೆ. ತುಳು, ಬ್ಯಾರಿ ಹೀಗೆ ಎಲ್ಲಾ ಭಾಷಿಕರ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ವಿಶಾಲ ಇತಿಹಾಸವಿರುವ ಕೊಂಕಣಿ ಭಾಷೆಯಲ್ಲಿ ಹಿಂದಿನ ಲೇಖಕರ ಹಾದಿಯಲ್ಲಿ ಸಾಗಿ ಇಂದು ಪ್ರಬುಧ್ದ, ಕ್ರಿಯಾತ್ಮಕಾ ಲೇಖಕರು ಬೆಳೆದು ಬರಲಿ, ಇದರೊಂದಿಗೆ ಕೊಂಕಣಿ ಸಮುದಾಯದ ಸಂಸ್ಕೃತಿಯೂ ಬೆಳೆಯಲಿ ಎಂದು ತಮ್ಮ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಪೊಯೆಟಿಕ ಕವಿ ಪಂಗಡ ಕಟ್ಟಿ ಕೊಂಕಣಿ ಕಾವ್ಯ ಕ್ಷೇತ್ರದಲ್ಲಿ ವಿಭಿನ್ನ ಛಾಪನ್ನಿತ್ತ ನವೀನ್ ಪಿರೇರಾ ಸುರತ್ಕಲ್, ಸಂದೇಶ ಪ್ರತಿಷ್ಟಾನದ ಪ್ರಸಸ್ತಿ ವಿಜೇತ ವಲ್ಲಿ ಕ್ವಾಡ್ರಸ್ ರನ್ನು ಡೊಲ್ಪಿ ಕಾಸ್ಸಿಯಾ ಹಾಗೂ ಆಂಡ್ರ್ರೂ ಡಿಕುನ್ಹಾ ಪುಷ್ಪಗಳನ್ನೀಡಿ ಅಭಿನಂದಿಸಿದರು. ಸಂಘದ ಸಂಚಾಲಕ ರಿಚಾರ್ಡ್ ಮೊರಾಸ್ ಪ್ರಾಸ್ತವಿಕ ಮಾತುಗಳನ್ನಾಡಿದರು.

ಡಾ. ಎಡ್ವರ್ಡ್ ನಜ್ರೆತ್ ಸ್ವಾಗತ ಮಾಡಿದರು. ಹೆನ್ರಿ ಮಸ್ಕರೇನಸ್ ಡಾ. ಜೆರಿ ನಿಡ್ಡೋಡಿಯವರ ಪರಿಚಯ ನೀಡಿದರು. ಫೆಲ್ಸಿ ಲೋಬೊರವರು ಸನ್ಮಾನಪತ್ರ ವಾಚಿಸಿದರು. ಜಾರ್ಜ್ ಲಿಗೋರಿ ಡಿಸೋಜ ಧನ್ಯವಾದಗೈದರು. ದಿಯಾ ಮಸ್ಕರೇನಸ್, ಕೆನಿಸ್ಸಾ ಡಿಸೋಜ, ಮ್ಯಾಕ್ಸಿಂ ರೊಡ್ರಿಗಸ್ ಬೊಂದೆಲ್ ಸಹಕರಿಸಿದರು. ರೆ. ಫಾ. ಮಾರ್ಕ್ ವಾಲ್ಡರ್, ಸೆವಕ್ ಸಂಪಾದಕಾ ರೆ. ಫಾ. ಚೇತನ್ ಕಾಪುಜಿನ್, ಲೇಖಕ ಜೆ. ಎಫ್. ಡಿಸೋಜ, ಎಂ.ಸಿ.ಸಿ ಬ್ಯಾಂಕ್ ನಿರ್ದೇಶಕ ಐರಿನ್ ಪಿಂಟೊ, ಹೆಸರಾಂತ ಸಾಹಿತಿಗಳು, ಅಭಿಮಾನಿಗಳು ಹಾಜರಿದ್ದರು. ಸಾಹಿತಿ ಲವಿ ಗಂಜಿಮಠ ಕಾರ್ಯಕ್ರಮ ನಿರ್ವಹಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.