



ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ,ಸಾಹಿತಿ,ಸಮಾಜ ಸೇವಕಿ ಡಾ.ಮಾಲತಿ ಶೆಟ್ಟಿ ಮಾಣೂರುರವರು ಬೆಂಗಳೂರಿನ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ನೀಡುವ " ರಾಷ್ಟ್ರೀಯ ಕಣ್ಮಣಿ" ರಾಷ್ಟ್ರ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ಸಂಸ್ಥೆಯ 29 ನೇ ವಾರ್ಷಿಕೋತ್ಸವದ ಸಮಾರಂಭದ ವೇಳೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸಾಹಿತ್ಯ,ಪತ್ರಿಕೋದ್ಯಮ ಕ್ಷೇತ್ರದ ಅಮೋಘ ಸಾಧನೆಗಾಗಿ ನೀಡುವ ಅನೇಕ ಪ್ರಶಸ್ತಿ ಗಳನ್ನು ಈಗಾಗಲೇ ಡಾ.ಮಾಲತಿ ಶೆಟ್ಡಿ ಮಾಣೂರುರವರು ಪಡೆದಿದ್ದಾರೆ.ಮಾನ್ಯ ಮುಖ್ಯಮಂತ್ರಿಗಳಿಂದ ಕರುನಾಡ ಸಿರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈವರೆಗೆ 9 ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. 8 ವರುಷಗಳಿಂದ 'ಅಮೃತ ಪ್ರಕಾಶ' ಎಂಬ ಸದಭಿರುಚಿಯ ಪತ್ರಿಕೆಯನ್ನು ನಡೆಸಿಕೊಂಡು ಬರುತಿದ್ದಾರೆ.ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ ಈಗಾಗಲೇ 44 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ.ಕರ್ನಾಟಕ ವಿಕಾಸ ರತ್ನ, ಭಾರತ ಜ್ಯೋತಿ,ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿ,ಕೆಂಗನ್ ಹನುಮಂತಯ್ಯ,ಅಭಿನಂದನ್ ವರ್ತಮಾನ ಪ್ರಶಸ್ತಿ 2019 ,ಕುದ್ಮುಲ್ ರಂಗರಾವ್, ಸೇರಿದಂತೆ 6 ರಾಜ್ಯ ಪ್ರಶಸ್ತಿ,2 ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ಸನ್ಮಾನಗಳು ಪ್ರಾಪ್ತವಾಗಿದೆ.2018 ರಲ್ಲಿ ಗೌರವ ಡಾಕ್ಟರೇಟ್ ಚೆನ್ನೈ ನಲ್ಲಿ ಪ್ರಾಪ್ತವಾಗಿದೆ.ಕಳೆದ 16 ವರುಷಗಳಿಂದ ಸಾಹಿತ್ಯ ,ಪತ್ರಿಕೋದ್ಯಮ,ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಮಾಣೂರಿನ ದಿ. ಕಿಟ್ಟಣ್ಣಶೆಟ್ಟಿ ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ.ಪ್ರಸ್ತುತ ಮಂಗಳೂರಿನ ಅತ್ತಾವರ ವೈದ್ಯನಾಥನಗರದಲ್ಲಿ ಪತಿ ಸತ್ಯಪ್ರಕಾಶ್ ಶೆಟ್ಟಿಯವರೊಂದಿಗೆ ವಾಸವಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.